ಕರ್ನಾಟಕ

karnataka

ಟ್ರ್ಯಾಕ್ಟರ್ ಚಾಲನೆ ಮಾಡಿದ ಶಾಸಕ ಶರಣು ಸಲಗರ

ETV Bharat / videos

Video: ಟ್ರ್ಯಾಕ್ಟರ್ ಚಾಲನೆ ಮಾಡಿ ಗಮನ ಸೆಳೆದ ಶಾಸಕ ಶರಣು ಸಲಗರ - ಜಮೀನಿನಲ್ಲಿ ಟ್ರ್ಯಾಕ್ಟರ್ ಚಾಲನೆ

By

Published : Jun 28, 2023, 1:32 PM IST

ಬೀದರ್ : ಬಸವಕಲ್ಯಾಣ ಶಾಸಕ ಶರಣು ಸಲಗರ ಅವರು ರೈತರ ಜಮೀನಿನಲ್ಲಿ ಟ್ರ್ಯಾಕ್ಟರ್ ಚಾಲನೆ ಮಾಡುವ ಮೂಲಕ ಸೋಯಾ ಬೀನ್, ತೋಗರಿ ಬಿತ್ತನೆ ಮಾಡಿ ಎಲ್ಲರ ಗಮನ ಸೆಳೆದರು.  

ರೈತರೊಂದಿಗೆ ರೈತನಾದ ಬಸವಕಲ್ಯಾಣ ಶಾಸಕ ಶರಣು ಸಲಗರ ಅವರು ಹುಲಸೂರು ಗ್ರಾಮದ ಬಾಳಪ್ಪ ತಿಮ್ಮಯ್ಯ ಎನ್ನುವರ ಹೊಲದಲ್ಲಿ ಬೀಜ ಬಿತ್ತನೆ ಮಾಡಿದರು. ಖಾಸಗಿ ಕಾರ್ಯಕ್ರಮ ಮುಗಿಸಿ ವಾಪಸ್ ಆಗಮಿಸುತ್ತಿರುವ ವೇಳೆ ಕಾರಿನಿಂದ ಕೆಳಗೆ ಇಳಿದು ರೈತರೊಂದಿಗೆ ಸಮಾಲೋಚನೆ ಮಾಡಿದರು. ಬಳಿಕ, ಟ್ರ್ಯಾಕ್ಟರ್ ಚಾಲನೆ ಮಾಡಿದರು. ಶಾಸಕರು ಟ್ರ್ಯಾಕ್ಟರ್ ಚಾಲನೆ ಮಾಡಿರುವುದಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಬೀದರ್ ಜಿಲ್ಲೆಯಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದೆ.  

ಇನ್ನು ಇತ್ತೀಚೇಗೆ ರಾಜಸ್ಥಾನದ ಬಾರ್ಮರ್‌ ಜಿಲ್ಲೆಯಲ್ಲಿ ನಡೆದ ಮದುವೆ ಮೆರವಣಿಗೆ ಎಲ್ಲರ ಗಮನ ಸೆಳೆದಿತ್ತು. 51 ಟ್ರ್ಯಾಕ್ಟರ್‌ಗಳ ಮೂಲಕ 51 ಕಿ.ಮೀ ಮೆರವಣಿಗೆ ನಡೆಸಲಾಗಿದ್ದು, ಆ ಪೈಕಿ ಒಂದು ಟ್ರ್ಯಾಕ್ಟರ್‌ ಅನ್ನು ವರನೇ ಓಡಿಸಿದ್ದನು. 51 ಟ್ರ್ಯಾಕ್ಟರ್‌ಗಳಲ್ಲಿ 200 ಕ್ಕೂ ಹೆಚ್ಚು ಅತಿಥಿಗಳು ಭಾಗಿಯಾಗಿದ್ದರು.

ಇದನ್ನೂ ಓದಿ :  Unique wedding : 51 ಟ್ರ್ಯಾಕ್ಟರ್​ಗಳಲ್ಲಿ 51 ಕಿ.ಮೀ ಸಾಗಿದ ಮದುವೆ ಮೆರವಣಿಗೆ... ಡ್ರೈವರ್​ ಆದ ಮದುಮಗ

ABOUT THE AUTHOR

...view details