ಜಗತ್ತಿನಲ್ಲಿ ಲೂಟಿ, ದರೋಡೆ ಮಾಡೋರು ಇದ್ದರೆ ಅದು ರಾಜಕಾರಣಿಗಳು: ಶಾಸಕ ರಾಜು ಕಾಗೆ - ಈಟಿವಿ ಭಾರತ ಕನ್ನಡ
Published : Dec 26, 2023, 10:32 PM IST
ಚಿಕ್ಕೋಡಿ: ರಾಜಕೀಯ ವ್ಯವಸ್ಥೆ ತುಂಬಾ ಕೆಟ್ಟೋಗಿದೆ. ರಾಜಕಾರಣಿಗಳು ಪವಿತ್ರವಾಗಿಲ್ಲ. ಜಗತ್ತಿನಲ್ಲಿ ಲೂಟಿ ಮಾಡೋರು, ದರೋಡೆ ಮಾಡೋರು ಇದ್ದರೆ ಅದು ರಾಜಕಾರಣಿಗಳು ಎಂದು ಕಾಗವಾಡ ಕ್ಷೇತ್ರದ ಹಿರಿಯ ಶಾಸಕ ರಾಜು ಕಾಗೆ ಹೇಳಿದ್ದಾರೆ. ಮಂಗಳವಾರ ರಾತ್ರಿ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಮುಗುಳಕೋಡ ಗ್ರಾಮದ ಖಾಸಗಿ ಶಾಲೆಯಲ್ಲಿ ನಡೆದ ಮಕ್ಕಳ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಶಾಲಾ ಮಕ್ಕಳಿಗೆ ಪಠ್ಯ ಪುಸ್ತಕ, ಶೂ ವಿತರಿಸುವ ಯೋಜನೆಗಳನ್ನು ರೂಪಿಸಲಾಗಿದೆ. ಅವುಗಳು ನಮ್ಮ ಕಮಿಷನ್‌ಗೆ. ಸದ್ಯ ಈ ವಿಚಾರವನ್ನು ಮಾತನಾಡುವುದು ಬೇಡ, ಮತ್ತೆ ಇದು ರೂಪಾಂತರವಾಗುತ್ತದೆ ಎಂದರು. ಈ ಮೂಲಕ ಶಾಸಕರು ಪ್ರಸ್ತುತ ರಾಜಕಾರಣದಲ್ಲಿ ಆಗುತ್ತಿರುವ ಹಲವು ಬದಲಾವಣೆಗಳ ಕುರಿತು ತೀವ್ರ ಅಸಮಾಧಾನ ಹೊರಹಾಕಿದರು.
ಇಂಥ ವೇದಿಕೆಯಲ್ಲಿ ನಾವು ಇದನ್ನೆಲ್ಲಾ ಮಾತನಾಡಬಾರದು. ನಮ್ಮ ಮಾನವನ್ನು ನಾವೇ ತೆಗೆದುಕೊಂಡಂತಾಗುತ್ತದೆ. ಶ್ರೀಗಳೊಂದಿಗೆ ಗೌರವ ಕೊಟ್ಟು ನಮ್ಮನ್ನು ಕರೆದುಕೊಂಡು ಬರಬೇಡಿ, ನಮ್ಮನ್ನು ಹಿತ್ತಿಲ ಬಾಗಿಲಿನಿಂದ ಕರೆದುಕೊಂಡು ಬನ್ನಿ. ಆ ಮಟ್ಟಿಗೆ ಸದ್ಯದ ವ್ಯವಸ್ಥೆ ಹದಗೆಟ್ಟು ಹೋಗಿದೆ ಎಂದು ಹೇಳಿದರು.
ಇದನ್ನೂ ಓದಿ:FRUITS ಆ್ಯಪ್ ಮೂಲಕ ಬರ ಪರಿಹಾರ ವಿತರಣೆ: ಸಚಿವ ಕೃಷ್ಣ ಭೈರೇಗೌಡ