ಕಳಪೆ ಕಾಮಗಾರಿ ಆರೋಪ ಗುತ್ತಿಗೆದಾರರಿಗೆ ಶಾಸಕರ ತರಾಟೆ.. ಸ್ಥಳದಲ್ಲೇ ಕನ್ನಡಕ ಕಿತ್ತು ಬಿಸಾಡಿದ ಎಂಎಲ್ಎ - Accused locals complained to MLA
ರಾಯಚೂರು: ಕಳಪೆ ಕಾಮಗಾರಿ ಮತ್ತು ಸಮಯಕ್ಕೆ ಸರಿಯಾಗಿ ಕಾಮಗಾರಿಯನ್ನು ಪೂರ್ಣಗೊಳಿಸದಿರುವುದಕ್ಕೆ ರಸ್ತೆಯಲ್ಲಿ ನಿಲ್ಲಿಸಿಕೊಂಡು ಸಾರ್ವಜನಿಕರ ಎದುರೇ ಗುತ್ತಿದಾರ ಮತ್ತು ಇಂಜಿನಿಯರ್ಗೆ ಮಾನವಿ ಕ್ಷೇತ್ರದ ಶಾಸಕ ರಾಜಾ ವೆಂಕಟಪ್ಪ ನಾಯಕ ತರಾಟೆ ತೆಗೆದುಕೊಂಡಿದ್ದಾರೆ. ಇನ್ನು ಈ ಘಟನೆ ಸಿರವಾರ ತಾಲೂಕಿನ ಕವಿತಾಳ ಪಟ್ಟಣದಲ್ಲಿ ನಡೆದಿದೆ. ಪಟ್ಟಣದಲ್ಲಿ ರಸ್ತೆಯ ಡಿವೈಡರ್ ಕಾಮಗಾರಿ ಕಳಪೆಯಾಗಿದೆ ಎಂದು ಆರೋಪಿಸಿ ಸ್ಥಳೀಯರು ಶಾಸಕರಿಗೆ ದೂರು ನೀಡಿದ್ದರು. ಈ ಹಿನ್ನೆಲೆ ಪರಿಶೀಲನೆ ನಡೆಸಿದ ಶಾಸಕರು ಕಾಮಗಾರಿ ಇನ್ನೂ ಪೂರ್ಣಗೊಳಿಸದೆ ಇವರುವುದಕ್ಕೆ ಆಕ್ರೋಶಗೊಂಡು ಗುತ್ತಿಗೆದಾರನ ಕನ್ನಡಕವನ್ನು ಕಿತ್ತೆಸೆದು, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಸದ್ಯ ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Last Updated : Feb 3, 2023, 8:38 PM IST