ಹೆಚ್ಡಿಕೆಯದ್ದು ಜಾತಿ ರಾಜಕಾರಣ.. ಜೋಶಿ ಸಿಎಂ ಅಗ್ಬಾರ್ದು ಅಂತೇನಿಲ್ಲ: ಶಾಸಕ ರಘುಪತಿ ಭಟ್ - ಈಟಿವಿ ಭಾರತ ಕನ್ನಡ
ಬೆಂಗಳೂರು: "ಭಾರತೀಯ ಜನತಾ ಪಕ್ಷವು ಜಾತಿ ಆಧಾರದಲ್ಲಿ ಯಾರನ್ನೂ ಪರಿಗಣಿಸಿಲ್ಲ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಸಿಎಂ ಆಗ್ಬಾರ್ದು ಅಂತೇನಿಲ್ಲ. ನಮ್ಮ ಹೈಕಮಾಂಡ್ ಯಾವತ್ತಿಗೂ ಜಾತಿ ಆಧಾರದ ಮೇಲೆ ಯಾರನ್ನೂ ಸಿಎಂ ಮಾಡಿಲ್ಲ" ಎಂದು ಬ್ರಾಹ್ಮಣ ಸಿಎಂ ವಿಚಾರವಾಗಿ ಉಡುಪಿ ಬಿಜೆಪಿ ಶಾಸಕ ರಘುಪತಿ ಭಟ್ ಪ್ರತಿಕ್ರಿಯಿಸಿದರು.
ವಿಧಾನಸೌಧದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ಜಾತಿ ಆಧಾರಿತ ವಿಚಾರ ತೆಗೆದಿದ್ದಾರೆ. ನಿಜವಾಗಿಯೂ ಅವರದ್ದು ಜಾತಿ ರಾಜಕಾರಣ, ಕುಟುಂಬ ರಾಜಕಾರಣ ಅಷ್ಟೇ. ನಮ್ಮಲ್ಲಿ ಆ ರೀತಿ ಇಲ್ಲ. ಭಾರತೀಯ ಜನತಾ ಪಕ್ಷದಲ್ಲಿ ಮುಖ್ಯಮಂತ್ರಿ ಆಯ್ಕೆಯನ್ನು ಜಾತಿ ಆಧಾರದ ಮೇಲೆ ಮಾಡಲ್ಲ. ಬದಲಾಗಿ ಅರ್ಹತೆ ಆಧಾರದಲ್ಲಿ ಮತ್ತು ನಾಯಕತ್ವದ ಗುಣಗಳ ಮೇಲೆ ಆಯ್ಕೆ ಮಾಡಲಾಗುತ್ತದೆ" ಎಂದು ಹೇಳಿದರು.
ಇದನ್ನೂ ಓದಿ:ಸಿದ್ದರಾಮಯ್ಯ ಹೊಸಪೇಟೆ ಕ್ಷೇತ್ರದಿಂದ ಸ್ಪರ್ಧಿಸಿದರೆ ಜಮೀನು ಮಾರಿ ಚುನಾವಣೆಗೆ ಹಣ ನೀಡ್ತಾರಂತೆ ಈ ಅಭಿಮಾನಿ!