ಹಿಂದೂ ಬೇರೆ ಹಿಂದುತ್ವ ಬೇರೆ ಎನ್ನುವ ವಾದವೇ ಸರಿಯಿಲ್ಲ: ಶಾಸಕ ಮಹೇಶ್ - etv bharat karnataka
ಚಾಮರಾಜನಗರ: ಹಿಂದೂ ಬೇರೆ ಹಿಂದುತ್ವ ಬೇರೆ ಎನ್ನುವ ವಾದವೇ ಸರಿಯಿಲ್ಲ, ಆ ಮಾತನ್ನು ಒಪ್ಪಲಾಗಲ್ಲ ಎಂದು ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಹೇಳಿದರು. ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಹಿಂದೂ ಬೇರೆ, ಹಿಂದುತ್ವ ಬೇರೆ ಎಂಬ ಮಾತು ಸರಿಯಲ್ಲ, ಯಾರು ಹಿಂದೂ ಧರ್ಮದ ತತ್ವಗಳು ಪಾಲನೆ ಮಾಡುತ್ತಾರೋ ಆತ ಹಿಂದೂ, ಹಿಂದುತ್ವ ಪಾಲನೆ ಮಾಡುವವನೂ ಹಿಂದು, ಹಿಂದೂ - ಹಿಂದುತ್ವ ಬೇರೆಯಲ್ಲ ಎಂದು ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ನಾನು ಓರ್ವ ಬುದ್ಧಿಸ್ಟ್, ಬೌದ್ಧ ಧರ್ಮದ ತತ್ವ ಅಂದರೆ ಬೌದ್ಧತ್ವ ಪಾಲನೆ ಮಾಡುವನು ಬೌದ್ಧ ಆಗುತ್ತಾನೆ, ಅದೇ ರೀತಿ ಹಿಂದುತ್ವ ಪಾಲನೆ ಮಾಡುವನು ಹಿಂದೂ ಆಗ್ತಾನೆ ಎಂದು ತಿಳಿಸಿದರು.
ಇದನ್ನೂ ಓದಿ:ಜೋಶಿ, ಬಿಎಸ್ವೈ ಹಾಗೂ ಬೊಮ್ಮಾಯಿ ಉತ್ತಮ ನಾಯಕರು: ರಾಜೀವ್ ಪ್ರತಾಪ್ ರೂಡಿ