ಮಕ್ಕಳೊಂದಿಗೆ ಕುಳಿತು ಊಟ ಸವಿದ ಶಾಸಕ ಮಹೇಶ್ ಕುಮಟಳ್ಳಿ - Quality nutritious food for children
ಚಿಕ್ಕೋಡಿ: ಸರಳತೆಗೆ ಹೆಸರುವಾಸಿಯಾಗಿರುವ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಅವರು ಇಂದು ಮತ್ತೊಮ್ಮೆ ಸರಳತೆ ಮೆರೆದಿದ್ದಾರೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ತಂಗಡಿ ಗ್ರಾಮದ ಶಾಲೆಗೆ ಅವರು ದಿಢೀರ್ ಭೇಟಿ ನೀಡಿ ಅಲ್ಲಿರುವ ಮಕ್ಕಳ ಜೊತೆ ನೆಲದ ಮೇಲೆಯೇ ಕುಳಿತು ಮಧ್ಯಾಹ್ನದ ಬಿಸಿ ಊಟ ಸವಿದಿದ್ದಾರೆ.
ಊಟ ಸವಿಯುತ್ತಾ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಊಟ ತುಂಬಾ ಚಲೋ ಇದೆ. ಉಪ್ಪು, ಖಾರವೂ ಸರಿಯಾಗಿದೆ. ಅಲ್ಲದೇ ಸಾಂಬಾರ್ನಲ್ಲಿ ತರಕಾರಿಯನ್ನು ಬಳಸಿದ್ದಾರೆ. ನಾವು ಈ ದಿನ ಶಾಲೆಗೆ ಭೇಟಿ ನೀಡುವ ವಿಚಾರ ಶಾಲಾ ಶಿಕ್ಷಕರಿಗೆ ಹಾಗೂ ಸಿಬ್ಬಂದಿಗೆ ತಿಳಿದಿರಲಿಲ್ಲ. ಆದರೆ, ನಾವಿಂದು ದಿಢೀರ್ ಎಂದು ಭೇಟಿ ನೀಡಿದ್ದೇವೆ ಎಂದರು.
ಕ್ಷೇತ್ರದಲ್ಲಿ ಮಕ್ಕಳಿಗೆ ಗುಣಮಟ್ಟದ ಪೌಷ್ಟಿಕಾಂಶ ಆಹಾರ ಸಿಗುತ್ತಿದೆ. ಒಳ್ಳೆಯ ಆಹಾರವನ್ನು ನೀಡುತ್ತಿದ್ದಾರೆ. ಒಂದು ವೇಳೆ ಉತ್ತಮ ಗುಣಮಟ್ಟದ ಆಹಾರವನ್ನು ನೀಡದೆ ಹೋದರೆ ನಾವು ಖಂಡಿತಾ ಕ್ರಮವನ್ನು ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು. ಹಲವು ಬಾರಿ ಇದೇ ರೀತಿ ಹಲವು ಶಾಲೆಗಳಿಗೆ ಸರ್ಪ್ರೈಸ್ ಆಗಿ ಭೇಟಿ ಕೊಡುತ್ತಿರುತ್ತೇವೆ. ತಾಲೂಕಿನಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಊಟ ತುಂಬಾ ರುಚಿಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಇದನ್ನೂ ಓದಿ :ಸಿಎಂ ಭಾಷಣದ ವೇಳೆ ಗುಡುಗು ಸಹಿತ ಮಳೆ.. ತಲೆ ಮೇಲೆ ಕುರ್ಚಿ ಹೊತ್ತು ನಿಂತ ಜನ