ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಜನಾರ್ದನ ರೆಡ್ಡಿ - MLA Janardana Reddy visited Dharmasthala
ಬೆಳ್ತಂಗಡಿ (ದಕ್ಷಿಣ ಕನ್ನಡ) : ಸಿಬಿಐ ವಿಶೇಷ ನ್ಯಾಯಾಲಯದ ಆದೇಶದ ಬೆನ್ನಲ್ಲೇ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಅವರು ಇಂದು ಕುಟುಂಬಸಮೇತರಾಗಿ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದಿದ್ದಾರೆ. ಈ ಸಂದರ್ಭದಲ್ಲಿ ಪತ್ನಿ ಅರುಣಾ ಲಕ್ಷ್ಮೀ, ಮಗಳು ಬ್ರಹ್ಮಿಣಿ ರೆಡ್ಡಿ, ಅಳಿಯ ರಾಜೀವ್ ಹಾಗೂ ಕುಟುಂಬಸ್ಥರು ಇದ್ದರು. ಶನಿವಾರ ರಾತ್ರಿ ದೇವಾಲಯದ ವಸತಿ ಗೃಹಕ್ಕೆ ಆಗಮಿಸಿದ್ದರು. ಇಂದು ಬೆಳಗ್ಗೆ ಮಂಜುನಾಥ ಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ರೆಡ್ಡಿ, "ಕಳೆದ 6 ವರ್ಷಗಳಿಂದ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಮಾಡಲು ಸಾಧ್ಯವಾಗಿಲ್ಲ. ಇಂದು ದರ್ಶನ ಪಡೆದಿದ್ದೇನೆ. ನಿನ್ನೆ ಸಿಬಿಐ ವಿಶೇಷ ಕೋರ್ಟ್ ಪ್ರಕರಣ ಸಂಬಂಧ ಆಸ್ತಿ ಪಾಸ್ತಿ ಮಾರಾಟ ಮಾಡದಂತೆ ಆದೇಶ ಮಾಡಿದೆ. ಧರ್ಮಸ್ಥಳದ ಮಂಜುನಾಥ ಧರ್ಮ ಮತ್ತು ನ್ಯಾಯ ಕೊಡುತ್ತಾನೆ. ಅವನಿಂದ ಯಾವಾಗಲೂ ನ್ಯಾಯವೇ ಸಿಗುತ್ತದೆ" ಎಂದು ರೆಡ್ಡಿ ಹರ್ಷ ವ್ಯಕ್ತಪಡಿಸಿದರು.
ಇದನ್ನೂ ಓದಿ :ಧರ್ಮಸ್ಥಳಕ್ಕೆ ಭೇಟಿ ನೀಡಿ ಮಂಜುನಾಥ ಸ್ವಾಮಿ ದರ್ಶನ ಪಡೆದ ಸಿಎಂ ಬೊಮ್ಮಾಯಿ