ಟೋಲ್‌ಪ್ಲಾಜಾ ಸಿಬ್ಬಂದಿಗೆ ಕಪಾಳಮೋಕ್ಷ ಮಾಡಿದ ಟಿಆರ್ಎಸ್ ಶಾಸಕ: ವಿಡಿಯೋ - ಟೋಲ್ ಸಿಬ್ಬಂದಿ ಮೇಲೆ ಶಾಸಕನ ಹಲ್ಲೆ
ರಸ್ತೆ ಕಾಮಗಾರಿ ಪೂರ್ಣಗೊಳಿಸದೇ ಜನರಿಂದ ಟೋಲ್ ಹಣ ಪಡೆಯುತ್ತಿರುವುದಕ್ಕೆ ಆಕ್ರೋಶಗೊಂಡ ತೆಲಂಗಾಣ ರಾಷ್ಟ್ರ ಸಮಿತಿ ಶಾಸಕ ದುರ್ಗಂ ಚಿನ್ನಯ್ಯ ಮಂಚೇರಿಯಲ್ ಜಿಲ್ಲೆಯ ಮಂದಮರ್ರಿ ಟೋಲ್ ಪ್ಲಾಜಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ. ಇದು ಅಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಳೆದ ತಿಂಗಳಷ್ಟೇ ಮಂದಮರ್ರಿ ಟೋಲ್ ಪ್ಲಾಜಾ ಆರಂಭಿಸಿ ವಾಹನ ಸವಾರರಿಂದ ಶುಲ್ಕ ಸಂಗ್ರಹಿಸಲಾಗುತ್ತಿದೆ. ಶಾಸಕರ ವಾಹನ ಟೋಲ್ ತಲುಪಿದಾಗ ರಸ್ತೆ ಅಪೂರ್ಣತೆ ಬಗ್ಗೆ ಪ್ರಶ್ನಿಸಿದ್ದಾರೆ. ಅಲ್ಲಿನ ಸಿಬ್ಬಂದಿ ಅನುಚಿತವಾಗಿ ವರ್ತಿಸಿದಾಗ, ಆಕ್ರೋಶಗೊಂಡ ಶಾಸಕರು ಕಾರಿನಿಂದ ಕೆಳಗಿಳಿದು ಸಿಬ್ಬಂದಿಗೆ ಕಪಾಳಮೋಕ್ಷ ಮಾಡಿದರು. ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
Last Updated : Feb 3, 2023, 8:38 PM IST