'ಹೋಟೆಲ್, ಲಾಡ್ಜ್ನಲ್ಲಿ ಕುಳಿತು ಮೀಸಲಾತಿ ವಿಂಗಡಣೆ ಮಾಡುವುದಲ್ಲ'
ವಿಜಯಪುರ: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಶಿಕಾರಿಪುರ ನಿವಾಸದ ಮೇಲೆ ನಡೆದ ಕಲ್ಲು ತೂರಾಟವನ್ಜು ತಾವು ಸೌಮ್ಯ ರೀತಿಯಲ್ಲಿ ಖಂಡಿಸುವುದಾಗಿ ನಾಗಠಾಣ ಮತಕ್ಷೇತ್ರದ ಜೆಡಿಎಸ್ ಶಾಸಕ ದೇವಾನಂದ ಚವ್ಹಾಣ ಹೇಳಿದರು. ವಿಜಯಪುರದಲ್ಲಿಂದು ಮಾತನಾಡಿದ ಅವರು "ಬಂಜಾರ ಸಮುದಾಯದವರಿಗೆ ಮೀಸಲಾತಿ ವರ್ಗೀಕರಣದಲ್ಲಿ ಅನ್ಯಾಯವಾಗಿದೆ ಎಂದು ಶಿಕಾರಿಪುರದ ಬಿಎಸ್ವೈ ನಿವಾಸದಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಯುತ್ತಿತ್ತು. ಈ ವೇಳೆ ಲಾಠಿ ಚಾರ್ಚ್ ನಡೆದ ಕಾರಣ ಬಂಜಾರ ಸಮುದಾಯದವರು ರೊಚ್ಚಿಗೆದ್ದು ಅವರ ನಿವಾಸದ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಹೊರತು ಯಾವುದೇ ಉದ್ದೇಶ ಪೂರ್ವಕವಾಗಿ ಗಲಾಟೆ ಮಾಡಿಲ್ಲ" ಎಂದರು.
"ಮೀಸಲಾತಿ ಪ್ರಕಟಣೆ ನಂತರ ಬಂಜಾರ ಸಮುದಾಯಕ್ಕೆ ಅನ್ಯಾಯ ಮಾಡಲಾಗಿದೆ. ಕೇವಲ ಬಂಜಾರ ಸಮುದಾಯದಲ್ಲಿಯೇ 101 ಉಪ ಜಾತಿಗಳಿವೆ. ಅದರಲ್ಲಿ ಶೇ.99ರಷ್ಟು ಜಾತಿಗಳಿಗೆ ಕೇವಲ 4.5ರಷ್ಟು ಮಾತ್ರ ಮೀಸಲಾತಿ ನೀಡಲಾಗಿದೆ. ಇದು ಸಮುದಾಯಕ್ಕೆ ಮಾಡಿದ ಅನ್ಯಾಯ. ಲಂಬಾಣಿ-ಬಂಜಾರ ಸಮುದಾಯ ಅಣ್ಣ ತಮ್ಮವರಂತೆ ಬಾಳುತ್ತಿದ್ದಾರೆ. ಅವರಲ್ಲಿ ಈ ರೀತಿ ತಾರತಮ್ಯ ಮಾಡುವುದು ಸರಿಯಲ್ಲ. ಬಿಜೆಪಿ ಸರ್ಕಾರ ಯಾವುದೇ ಹೋಟೆಲ್, ಲಾಜ್ಡ್ನಲ್ಲಿ ಕುಳಿತುಕೊಂಡು ಮೀಸಲಾತಿ ವಿಂಗಡಣೆ ಮಾಡುವುದಲ್ಲ" ಎಂದರು.
"ಬಿಜೆಪಿ ಸರ್ಕಾರ ಯಾವಾಗಲೂ ಒಗ್ಗೂಡಿಸಿ ಆಡಳಿತ ನಡೆಸಿದ ಉದಾಹರಣೆಗಳೇ ಇಲ್ಲ. ಅವರದ್ದು ಏನಾದರೂ ಒಡೆದು ಆಳುವ ನೀತಿ ಎಂದು ವಾಗ್ದಾಳಿ ನಡೆಸಿದರು. ಮೀಸಲಾತಿ ಹಿಂಪಡೆಯದಿದ್ದರೆ ಹಿಂಸೆಯ ಹೋರಾಟಕ್ಕೂ ನಾವು ಸಿದ್ದರಾಗಿದ್ದೇವೆ. ಏನೇ ಆಗಲಿ ನಮಗೆ ನ್ಯಾಯ ಸಿಗುವವರೆಗೆ ಶಾಂತಿಯುತವಾಗಿ ಹೋರಾಟ ಮಾಡುತ್ತೇವೆ" ಎಂದು ಹೇಳಿದರು.
ಇದನ್ನೂ ಓದಿ:ತಪ್ಪು ಗ್ರಹಿಕೆಯಿಂದ ನಮ್ಮ ಮನೆ ಮೇಲೆ ಕಲ್ಲು ತೂರಾಟ, ಯಾರ ಮೇಲೂ ಕ್ರಮ ಬೇಡ: ಬಿಎಸ್ವೈ