ಮಕ್ಕಳೊಂದಿಗೆ ಕುಳಿತು ಬಿಸಿಯೂಟ ಸವಿದ ಶಾಸಕ ಡಾ.ಚಂದ್ರು ಲಮಾಣಿ- ವಿಡಿಯೋ - ಚಂದ್ರು ಲಮಾಣಿ
ಗದಗ:ಶಾಸಕ ಡಾ.ಚಂದ್ರು ಲಮಾಣಿ ಅವರು ಇಂದು (ಬುಧವಾರ) ಶಿರಹಟ್ಟಿ ತಾಲೂಕಿನ ಮೇಗೇರಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳೊಂದಿಗೆ ಕುಳಿತು ಬಿಸಿಯೂಟ ಸೇವಿಸಿ ಗಮನ ಸೆಳೆದರು. ಶಾಲೆಗೆ ಆಗಮಿಸಿದ ಶಾಸಕರಿಗೆ ಸಾಲಾಗಿ ನಿಂತು ವಿದ್ಯಾರ್ಥಿಗಳು ಸ್ವಾಗತ ಕೋರಿದರು.
ಬಿಸಿಯೂಟ ಕೊಠಡಿಗೆ ತೆರಳಿದ ಶಾಸಕ ಅಡುಗೆ ಸಿಬ್ಬಂದಿಯ ಬಳಿ ಮೆನು ಬಗ್ಗೆ ಕೇಳಿದರು. ಇಂದು ಬುಧವಾರವಾಗಿದ್ದು ಪಲಾವ್ ಮಾಡಲಾಗಿದೆ ಎಂದು ಅವರು ತಿಳಿಸಿದರು. ಬಳಿಕ ಶಾಲಾ ಆವರಣದಲ್ಲೇ ಮಕ್ಕಳೊಟ್ಟಿಗೆ ಕುಳಿತು ಬಿಸಿಯೂಟ ಸೇವಿಸುವ ಮೂಲಕ ಸರಳತೆ ಮೆರೆದರು. ಇದಕ್ಕೂ ಮುನ್ನ ಶಾಸಕರು ಶಾಲೆಯ ಕುಂದುಕೊರತೆಗಳ ಬಗ್ಗೆ ಮಾಹಿತಿ ಪಡೆದರು. ಕೆಲವು ಮೂಲ ಸೌಲಭ್ಯಗಳನ್ನು ಒದಗಿಸುವಂತೆ ಶಾಲಾ ಶಿಕ್ಷಕರು ಶಾಸಕರಿಗೆ ಮನವಿ ಮಾಡಿದ್ದಾರೆ.
ಇವುಗಳನ್ನು ಓದಿ:ಒಂದೇ ಸೂರಿನಡಿ ಸಕಲ ಆರೋಗ್ಯ ಸೇವೆ: ಉದ್ಘಾಟನೆ ಭಾಗ್ಯಕ್ಕೆ ಕಾದು ನಿಂತಿದೆ ಕಿಮ್ಸ್‌ನ ನೂತನ ತರ್ತು ಚಿಕಿತ್ಸಾ ಘಟಕ
ಮಂಡ್ಯ ಮೈಶುಗರ್ಸ್ ಕಾರ್ಖಾನೆ ಪುನಶ್ಚೇತನಕ್ಕೆ ₹50 ಕೋಟಿ ಬಿಡುಗಡೆ; ಕೊಟ್ಟ ಮಾತು ಉಳಿಸಿಕೊಂಡ ಸಿದ್ದರಾಮಯ್ಯ