ಕರ್ನಾಟಕ

karnataka

ETV Bharat / videos

ನನಗೆ ಯಾವುದೇ ನೋಟಿಸ್ ಬಂದಿಲ್ಲ: ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್ - ವಾಜಪೇಯಿ ಅವರು ಇದ್ದಾಗಲೂ ನನಗೆ ನೋಟಿಸ್ ನೀಡಿದ್ದರು

By

Published : Jan 16, 2023, 9:22 PM IST

Updated : Feb 3, 2023, 8:39 PM IST

ವಿಜಯಪುರ: ಕೇಂದ್ರದಿಂದ ನೋಟಿಸ್​ ಜಾರಿ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​, ನನಗೆ ಯಾವುದೇ ನೋಟಿಸ್ ಬಂದಿಲ್ಲ, ಸುಮ್ಮನೆ ಊಹಾಪೋಹಾ ಹರಡಿಸಿದ್ದಾರೆ. ನಾನು ನೋಟಿಸ್ ಕೊಡುವಂತಹ ಪಕ್ಷ ವಿರೋಧಿ ಹೇಳಿಕೆ ನೀಡಿಲ್ಲ ಎಂದಿದ್ದಾರೆ. ಭ್ರಷ್ಟರು, ವಂಶಪಾರಂಪರ್ಯ ರಾಜಕೀಯ ಮುಂದುವರೆಸುವ ಬಗ್ಗೆ ಮಾತನಾಡಿದ್ದೇನೆ. ನನಗೆ ನೋಟಿಸ್ ನೀಡಿದ್ದರೆ ಇಷ್ಟೊತ್ತಿಗೆ ಬಂದಿರುತ್ತಿತ್ತು. ನೋಟಿಸ್ ಯಾಕೆ ನೀಡಿಲ್ಲ ಅಂತಾ ಕೆಲವರಿಗೆ ಕಾಡುತ್ತಿದೆ. ಅದಕ್ಕೆ ಇಂತಹ ಊಹಾಪೋಹ ಹರಡುತ್ತಿದ್ದಾರೆ. ಈ ಹಿಂದೆ ವಾಜಪೇಯಿ ಅವರು ಇದ್ದಾಗಲೂ ನನಗೆ ನೋಟಿಸ್ ನೀಡಿದ್ದರು. ಆದರೆ, ನಾನು ಮೂರು ತಿಂಗಳಿಗೆ ಕೇಂದ್ರ ಮಂತ್ರಿಯಾದೆ. ಇದೆಲ್ಲ ರಾಜಕೀಯ ವಿರೋಧಿಗಳ ಷಡ್ಯಂತ್ರ ಅಷ್ಟೇ ಎಂದರು. 

Last Updated : Feb 3, 2023, 8:39 PM IST

ABOUT THE AUTHOR

...view details