ಕರ್ನಾಟಕ

karnataka

ಸಿದ್ದರಾಮೇಶ್ವರ ಉತ್ಸವದಲ್ಲಿ ಸಖತ್ ಡ್ಯಾನ್ಸ್ ಮಾಡಿದ ಶಾಸಕ‌ ಬಿ ದೇವೇಂದ್ರಪ್ಪ

ETV Bharat / videos

ಸಿದ್ದರಾಮೇಶ್ವರ ಉತ್ಸವದಲ್ಲಿ ಸಖತ್ ಡ್ಯಾನ್ಸ್ ಮಾಡಿದ ಶಾಸಕ‌ ಬಿ ದೇವೇಂದ್ರಪ್ಪ - ಸಿದ್ದರಾಮೇಶ್ವರ ಉತ್ಸವ

By ETV Bharat Karnataka Team

Published : Jan 15, 2024, 5:35 PM IST

ದಾವಣಗೆರೆ: ಜಗಳೂರು ಕಾಂಗ್ರೆಸ್ ಶಾಸಕ ಬಿ ದೇವೇಂದ್ರಪ್ಪ ಸಿದ್ದರಾಮೇಶ್ವರ ಉತ್ಸವದಲ್ಲಿ ಸಖತ್ ಡ್ಯಾನ್ಸ್ ಮಾಡಿದರು. ದಾವಣಗೆರೆ ‌ಜಿಲ್ಲೆಯ ಜಗಳೂರು ಪಟ್ಟಣದಲ್ಲಿ ನಡೆದ ಸಿದ್ದರಾಮೇಶ್ವರ ಉತ್ಸವದಲ್ಲಿ ಭಾಗಿಯಾದ ಶಾಸಕ ಬಿ ದೇವೇಂದ್ರಪ್ಪ ಕೆಲ ಮುಖಂಡರೊಂದಿಗೆ ಸೇರಿ ಕನ್ನಡ ಹಾಡಿಗೆ ಭರ್ಜರಿಯಾಗಿ ಕುಣಿದರು. 

ಸಿದ್ದರಾಮೇಶ್ವರ ಉತ್ಸವದ ಮೆರವಣಿಗೆ ವಿವಿಧ ಹಾದಿಯಲ್ಲಿ ಸಾಗಿ ಬರುವ ವೇಳೆ ಆಗಮಿಸಿದ ಸ್ಥಳೀಯ ಕಾಂಗ್ರೆಸ್ ಶಾಸಕ ಬಿ ದೇವೇಂದ್ರಪ್ಪ ಅವರು, ಕುಣಿದು ಸ್ಥಳೀಯರೊಂದಿಗೆ ಆ ಕ್ಷಣವನ್ನು ಎಂಜಾಯ್ ಮಾಡಿದರು.

ಭೋವಿ ಸಮಾಜದ ವಿವಿಧ ಮುಖಂಡರೊಂದಿಗೆ ಕೈ ಹಿಡಿದು ಪರಸ್ಪರ ಡಿಜೆ ಸದ್ದಿಗೆ ಕುಣಿದು ಕುಪ್ಪಳಿಸಿದ್ರು. ಇದಲ್ಲದೇ ಡಿಜೆಯ ಕರ್ಕಶ ಶಬ್ದಕ್ಕೆ ಸ್ಥಳೀಯ ವೃದ್ಧರು ಮತ್ತು ಮಕ್ಕಳು ಕಿವಿ ಮುಚ್ಚಿಕೊಂಡು ‌ಹಿಂಸೆ ಅನುಭವಿಸಿದ ಪ್ರಸಂಗವೂ ಕೂಡ ನಡೆಯಿತು. ‌ 

ಭಾರಿ ಡಿಜೆ ಸದ್ದಿಗೆ ಉತ್ಸವದ ಉದ್ದಕ್ಕೂ ಕಿವಿ ಮುಚ್ಚಿಕೊಂಡು‌ ವೃದ್ಧರು ನಿಂತಿದ್ದರು. ಈ ಹಿಂದೆಯೂ ಕೂಡ ಜಗಳೂರು ತಾಲೂಕಿನ ಹಳ್ಳಿಯೊಂದರಲ್ಲಿ ಯಜಮಾನ ಚಿತ್ರದ ಕನ್ನಡ ಹಾಡಿಗೆ ವೇದಿಕೆ ಮೇಲೆ ಸಖತ್ ಡ್ಯಾನ್ಸ್​ ಮಾಡಿ ನೆರೆದಿದ್ದ ಜನರನ್ನು ರಂಜಿಸಿದ್ದರು.

ಇದನ್ನೂ ಓದಿ:  ಪೊಲೀಸ್ ಕ್ರೀಡಾಕೂಟ: ಜಾನಪದ ಹಾಡಿಗೆ ರಾಯಚೂರು ಎಸ್​ಪಿ ಸಖತ್​ ಡ್ಯಾನ್ಸ್​

ABOUT THE AUTHOR

...view details