ಶಾಸಕ ಅರವಿಂದ ಬೆಲ್ಲದ್ ಡಿಕೆಶಿ ಭೇಟಿ ಮಾಡಿದ್ದಾರೆ ಅನ್ನೋದೆಲ್ಲ ಕೇವಲ ಊಹಾಪೋಹ: ಜೋಶಿ - ಫೇಕ್ ವಿಡಿಯೋ
ಧಾರವಾಡ: ಶಾಸಕ ಅರವಿಂದ ಬೆಲ್ಲದ್ ಅವರು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ಭೇಟಿ ಭೇಟಿ ಮಾಡಿರುವುದು ಕೇವಲ ಊಹಾಪೋಹ ಅಷ್ಟೇ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ಇಂಥ ಊಹಾಪೋಹಗಳು ಮೊದಲಿಂದಲೂ ಇವೆ. ಶಾಸಕ ಅರವಿಂದ ಬೆಲ್ಲದ್ ಅವರು ಬೆಳಗ್ಗೆ ನನ್ನೊಂದಿಗೆ ಮಾತಾಡಿದ್ದಾರೆ ಎಂದರು.
ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಜೋಶಿ, ಅದೆಲ್ಲವೂ ಸಂಪೂರ್ಣ ಸುಳ್ಳು. ಸಿ ಟಿ ರವಿ ಲಿಂಗಾಯತರ ಬಗ್ಗೆ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿ, ಅದರ ಬಗ್ಗೆ ಈಗಾಗಲೇ ಸ್ಪಷ್ಟಪಡಿಸಲಾಗಿದೆ. ಅದೊಂದು ಬೋಗಸ್ ವಿಡಿಯೋ. ಈಗಾಗಲೇ ಅದರ ಬಗ್ಗೆ ಫ್ಯಾಕ್ಟ್ ಚೆಕ್ ಆಗಿದೆ. ಕಾಂಗ್ರೆಸ್‌ನವರು ಇಂಥ ಫೇಕ್ ವಿಡಿಯೋ ಹರಿಬಿಟ್ಟು ಜನರನ್ನು ಮರಳು ಮಾಡಲು ಹೊರಟಿದ್ದಾರೆ. ಅನೇಕ ಮಾಧ್ಯಮಗಳಲ್ಲಿ ಅದು ಫೇಕ್ ಅನ್ನೋದು ಬಂದಿದೆ ಎಂದು ಸಮರ್ಥನೆ ಮಾಡಿಕೊಂಡರು.
ಸಿ ಟಿ ರವಿ ಪ್ರಬುದ್ಧ ರಾಜಕಾರಣಿ, ಅವರು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಅವರು ಈ ರೀತಿ ಹೇಳಲು ಸಾಧ್ಯವೇ ಇಲ್ಲ. ನಮಗೆ ಎಲ್ಲ ಸಮುದಾಯದ ಬಗ್ಗೆ ಗೌರವ ಇದೆ. ವಿಶೇಷವಾಗಿ ಲಿಂಗಾಯತರ ಬಗ್ಗೆ ಗೌರವವಿದೆ ಅಂತಾ ಸಚಿವ ಜೋಶಿ ಸ್ಪಷ್ಟಪಡಿಸಿದರು.
ಮಾಜಿ ಸಿಎಂ ಸಿದ್ದರಾಮಯ್ಯ ಕೋಲಾರದಿಂದ ವರುಣಾಕ್ಕೆ ಶಿಫ್ಟ್ ಆಗ್ತಾರೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಜೋಶಿ ಅವರು, ಸಿದ್ದರಾಮಯ್ಯಗೆ ಕ್ಷೇತ್ರ ಸಿಗದಂಥ ವಾತಾವರಣ ಸೃಷ್ಟಿಯಾಗಿದೆ. ಆ ಪಕ್ಷದ ಪರಿಸ್ಥಿತಿ ಏನಾಗಿದೆ ಅನ್ನೋದನ್ನು ತಿಳಿದುಕೊಳ್ಳಿ. ಜನರು ಆ ಪಕ್ಷದ ಪರಿಸ್ಥಿತಿ ಅರ್ಥ ಮಾಡಿಕೊಳ್ಳಬೇಕಿದೆ ಎಂದರು.
ಇದನ್ನೂಓದಿ:ದೇಶದ ಪ್ರಜಾಪ್ರಭುತ್ವದ ಯಶಸ್ಸು ಕೆಲವರಿಗೆ ನೋವುಂಟು ಮಾಡಿದೆ: ಪ್ರಧಾನಿ ಮೋದಿ ವಾಗ್ದಾಳಿ