ಟೊಮೆಟೋ ಗಿಡಗಳನ್ನು ಕಿತ್ತು ಹಾಕಿದ ದುಷ್ಕರ್ಮಿಗಳು: ಕಣ್ಣೀರಿಟ್ಟ ರೈತ ದಂಪತಿ - ಶಿವಣ್ಣ ಮತ್ತು ಪತ್ನಿ ಶಾರದಮ್ಮ
ದುಷ್ಕರ್ಮಿಗಳು 5000 ಟೊಮ್ಯಾಟೋ ಗಿಡಗಳನ್ನು ಕಿತ್ತು ನಾಶ ಮಾಡಿರುವ ಘಟನೆ ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ಹುಲಿಕುಂಟೆ ಹೋಬಳಿಯ ಕೊಟ್ಟಿ ಗ್ರಾಮದಲ್ಲಿ ನಡೆದಿದೆ. ಮಾಜಿ ಗ್ರಾಮ ಪಂಚಾಯಿತಿ ಸದಸ್ಯರಾದ ಶಿವಣ್ಣ ಎಂಬುವರ ಹೊಲದಲ್ಲಿ ಟೊಮೆಟೋ ಸಸಿಗಳನ್ನು ಕಿತ್ತುಹಾಕಲಾಗಿದೆ. ಮಾಲೀಕರಾದ ಶಿವಣ್ಣ ಮತ್ತು ಪತ್ನಿ ಶಾರದಮ್ಮ ಹೊಲದಲ್ಲಿ ನಿಂತು ಕಣ್ಣೀರಿಟ್ಟಿದ್ದಾರೆ. ನಮ್ಮ ಹೊಲದಲ್ಲಿ ನಾಟಿ ಮಾಡಿದ ಟೊಮೆಟೋ ಸಸಿಗಳನ್ನು ಕಿತ್ತು ಹಾಕಿದ್ದಾರೆ. ಇದಕ್ಕೆ ಸಂಬಂಧ ಪಟ್ಟ ಅಧಿಕಾರಿಗಳು ನಮಗೆ ನ್ಯಾಯ ಕೊಡಿಸಬೇಕೆಂದು ಮನವಿ ಮಾಡಿದ್ದಾರೆ.
Last Updated : Feb 3, 2023, 8:30 PM IST