ನಿಧಿ ಆಸೆಗೆ ಆಂಜನೇಯ ದೇವಾಲಯದ ಗರ್ಭಗುಡಿಯಲ್ಲೇ ಗುಂಡಿ ಅಗೆದರು! - ETV Bharat Kannada News
ತುಮಕೂರು :ನಿಧಿ ಆಸೆಗಾಗಿ ಪುರಾತನ ಆಂಜನೇಯ ದೇವಾಲಯದ ಗರ್ಭಗುಡಿಯಲ್ಲಿಯೇ ದುಷ್ಕರ್ಮಿಗಳು ಗುಂಡಿ ಅಗೆದಿರುವ ಘಟನೆ ಶಿರಾ ತಾಲ್ಲೂಕಿನ ಗುಮ್ಮನಹಳ್ಳಿಯಲ್ಲಿ ನಡೆದಿದೆ. ಶಿರಾ ದೊಡ್ಡಕೆರೆಗೆ ನೀರು ಹರಿಯುವ ಹಳ್ಳದ ದಂಡೆಯಲ್ಲಿ ಪುರಾತನ ಕಾಲದ ಆಂಜನೇಯ ದೇಗುಲವಿದೆ. ಹಲವು ವರ್ಷಗಳಿಂದ ಪೂಜಾ ಕೈಂಕರ್ಯಗಳು ನಡೆಯದ ಕಾರಣ ದೇವಾಲಯದ ಸುತ್ತಮುತ್ತ ಹಾಗೂ ಒಳಭಾಗದಲ್ಲಿ ಗಿಡ-ಗಂಟಿಗಳು ಬೆಳೆದಿವೆ. ಇವತ್ತು ಬೆಳಗ್ಗೆ ಕೆಲವು ಯುವಕರು ದೇವಾಲಯದ ಬಳಿ ಹೋದಾಗ ಗರ್ಭಗುಡಿ, ಒಳ ಆವರಣದಲ್ಲಿ ಹತ್ತಾರು ಅಡಿ ಅಗೆದಿರುವುದು ಗೊತ್ತಾಗಿದೆ.
ಶಿರಾ ಪೊಲೀಸ್ ಠಾಣೆಗೆ ಗ್ರಾಮಸ್ಥರು ದೂರು ನೀಡಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ಧಾರೆ.
ಇದನ್ನೂ ಓದಿ:ಹಾವೇರಿ ಬಳಿ ನಿಧಿ ಆಸೆ ತೋರಿಸಿದ್ದ ವ್ಯಕ್ತಿಯ ಕೊಲೆ: ಆರೋಪಿಗಳಿಗೆ ನ್ಯಾಯಾಂಗ ಬಂಧನ