ಲಕ್ಷಾಂತರ ರೂ. ಮೌಲ್ಯದ ಟೊಮೆಟೊ ನಾಶ: ಹೊಲದಲ್ಲಿ ಬಿದ್ದು ಹೊರಳಾಡಿದ ರೈತ - ಟೊಮೆಟೊ ದರ
ಚಾಮರಾಜನಗರ :ದಿನದಿಂದ ದಿನಕ್ಕೆ ಟೊಮೆಟೊ ದರ ಗಗನಕ್ಕೆ ಏರುತ್ತಿದೆ. ಇದರಿಂದಾಗಿ ಗ್ರಾಹಕರು ತರಕಾರಿ ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ಇನ್ನೊಂದೆಡೆ, ಟೊಮೆಟೊ ಬೆಳೆದ ರೈತರು ಭಾರಿ ಲಾಭದ ನಿರೀಕ್ಷೆಯಲ್ಲಿದ್ದಾರೆ. ಈ ಬೆನ್ನಲ್ಲೇ ದ್ವೇಷ ಹಾಗೂ ಇನ್ನಿತರ ಕಾರಣಗಳಿಂದ ಕಿಡಿಗೇಡಿಗಳು ಒಂದು ಮೂಕ್ಕಾಲು ಎಕರೆ ಟೊಮೆಟೊ ಬೆಳೆಯನ್ನು ನಾಶಪಡಿಸಿರುವ ಘಟನೆ ಚಾಮರಾಜನಗರ ತಾಲೂಕಿನ ಮಲೆಯೂರು ಸಮೀಪದ ಕೆಬ್ಬೇಪುರ ಗ್ರಾಮದಲ್ಲಿ ನಡೆದಿದೆ.
ಇದನ್ನೂ ಓದಿ :ದೊಡ್ಡಬಳ್ಳಾಪುರ : ಉಚಿತ ಎಂದಾಗ ಬೆಳೆಗೆ ಕ್ರಿಮಿನಾಶಕ ಬಳಸಿದ ರೈತ.. ಟೊಮೆಟೊ ನಾಶವಾಗಿ ಭಾರಿ ಆಘಾತ
ರೈತ ಮಂಜು ಎಂಬುವರಿಗೆ ಸೇರಿದ ಅಂದಾಜು 20 ಲಕ್ಷ ರೂ. ಮೌಲ್ಯದ ಟೊಮೆಟೊ ಬೆಳೆಯನ್ನು ಕಿಡಿಗೇಡಿಗಳು ನಾಶಪಡಿಸಿದ್ದಾರೆ. ಜಮೀನಿನಲ್ಲಿ ಟೊಮೆಟೊ ನೆಲ ಕಚ್ಚಿದ್ದನ್ನು ಕಂಡ ರೈತ ಮಂಜು, ಬೆಳೆ ಮಧ್ಯೆ ಬಿದ್ದು ಹೊರಳಾಡಿ ಆಕ್ರಂದನ ಹೊರಹಾಕಿದರು. ಈ ಸಂಬಂಧ ಬೇಗೂರು ಪೊಲೀಸರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ :ಟೊಮೆಟೊಗೆ ಬಂಪರ್ ಬೆಲೆ .. ಆನಂದದಲ್ಲಿ ತೇಲುತ್ತಿರುವ ಚಿಕ್ಕಮಗಳೂರು ಜಿಲ್ಲೆಯ ರೈತರು