ಕರ್ನಾಟಕ

karnataka

ಲಂಡನ್​ನಿಂದ ಶಿವಾಜಿಯ ವಾಘ್​ನಖ್​ ಮರಳಿ ತರುವ ಒಪ್ಪಂದಕ್ಕೆ ಸಹಿ ಹಾಟಿಕ ಮಹಾ ಸಚಿವ

ETV Bharat / videos

ಲಂಡನ್​ನಿಂದ ಶಿವಾಜಿಯ ವಾಘ್​ನಖ್​ ಮರಳಿ ತರುವ ಒಪ್ಪಂದಕ್ಕೆ ಸಹಿ ಹಾಕಿದ ಮಹಾ ಸಚಿವರು - ಒಪ್ಪಂದಕ್ಕೆ ಸಹಿ ಹಾಕಿದ ಮಹಾ ಸಚಿವರು

By ETV Bharat Karnataka Team

Published : Oct 4, 2023, 2:33 PM IST

ಮುಂಬೈ/ಲಂಡನ್​: ಲಂಡನ್​ನ ವಿಕ್ಟೋರಿಯಾ ಮತ್ತು ಆಲ್ಬರ್ಟ್​ ಮ್ಯೂಸಿಯಂನಲ್ಲಿರುವ ಛತ್ರಪತಿ ಶಿವಾಜಿಯ ವಾಘ್​ನಖ್ (Tiger Claw)​ ಅನ್ನು ಮರಳಿ ಭಾರತಕ್ಕೆ ತರುವ ಒಪ್ಪಂದಕ್ಕೆ ಮಹಾರಾಷ್ಟ್ರದ ಸಚಿವರಾದ ಸುಧೀರ್​ ಮುಂಗಟಿವಾರ್​ ಹಾಗೂ ಉದಯ್​ ಸಾಮಂತ್​ ಅವರು ಇಂದು ಸಹಿ ಹಾಕಿದ್ದಾರೆ. ಸಚಿವರಿಬ್ಬರು ಶೀಘ್ರದಲ್ಲಿ ವಾಘ್​ನಖ್​ನೊಂದಿಗೆ ಭಾರತಕ್ಕೆ ಮರಳಲಿದ್ದಾರೆ. ವಾಘ್​ನಖ್​ ಅನ್ನು ಮೂರು ವರ್ಷಗಳ ಅವಧಿಗೆ ಭಾರತಕ್ಕೆ ತರಲು ಲಂಡನ್​ನ ವಿಕ್ಟೋರಿಯಾ ಮತ್ತು ಆಲ್ಬರ್ಟ್​ ಮ್ಯೂಸಿಯಂನೊಂದಿಗೆ ಮಹಾರಾಷ್ಟ್ರ ಸರ್ಕಾರ ಒಪ್ಪಂದಕ್ಕೆ ಸಹಿ ಹಾಕಿದೆ.

ಸಚಿವ ಸುಧೀರ್​ ಮುಂಗಟಿವಾರ್​ ಹಾಗೂ ಉದಯ್​ ಸಾಮಂತ್​ ಒಪ್ಪಂದಕ್ಕೆ ಸಹಿ ಹಾಕಿ ಹೊರ ಬರುತ್ತಿದ್ದಂತೆ ಲಂಡನ್​ನಲ್ಲಿರುವ ಭಾರತೀಯರು ಬ್ಯಾಂಡ್​, ವಾದ್ಯಗಳೊಂದಿಗೆ, ಜೈ ಭವಾನಿ, ಜೈ ಶಿವಾನಿ ಘೋಷಣೆಗಳನ್ನು ಕೂಗಿ ಸಂಭ್ರಮಿಸಿದರು.

ಛತ್ರಪತಿ ಶಿವಾಜಿ ಮಹಾರಾಜ್​ ಬಳಸುತ್ತಿದ್ದ, ಅಫ್ಜಲ್ ಖಾನ್​ನನ್ನು ಕೊಲ್ಲಲು ಬಳಸಿದ್ದ ಐತಿಹಾಸಿಕ ಹಿನ್ನೆಲೆಯುಳ್ಳ ವಾಘ್​ನಫ್​ ಲಂಡನ್​ನ ವಿಕ್ಟೋರಿಯಾ ಆಲ್ಬರ್ಟ್​ ಮ್ಯೂಸಿಯಂನಲ್ಲಿ ಪ್ರದರ್ಶನಕ್ಕಿದೆ. ಇತಿಹಾಸಕಾರ ಗ್ರಾಂಟ್​ ಡಫ್​ ಸತಾರದಲ್ಲಿ ಸೇವೆ ಸಲ್ಲಿಸುತ್ತಿದ್ದಾಗ, ಸತಾರದ ಛತ್ರಪತಿ ಪ್ರತಾಪ್​ ಸಿಂಗ್​ ಮಹಾರಾಜ ವಾಘ್​ ನಖ್​ ಅನ್ನು ಅವರಿಗೆ ಬಹುಮಾನವಾಗಿ ನೀಡಿದ್ದರು. ಅದನ್ನು ಅವರು ಯುಕೆಗೆ ಹೋಗುವಾಗ ಅವರ ಜೊತೆಗೆ ಕೊಂಡೊಯ್ದಿದ್ದರು ಎಂದು ಹೇಳಲಾಗುತ್ತದೆ. ಇದೀಗ ಅದನ್ನು ಭಾರತಕ್ಕೆ ತರಲು ಮಹಾರಾಷ್ಟ್ರದ ಇಬ್ಬರು ಸಚಿವರು ಲಂಡನ್​ಗೆ ತೆರಳಿದ್ದಾರೆ.

ಇದನ್ನೂ ಓದಿ :ಮ್ಯೂಸಿಯಂನಲ್ಲಿ ಶಿವಾಜಿ ಮಹಾರಾಜರ ’ವಾಘ್ ನಖ್’ ಪ್ರದರ್ಶನ: ಸುಧೀರ್ ಮುಂಗಂತಿವಾರ್

ABOUT THE AUTHOR

...view details