Watch... ಬೈಸಿಕಲ್ ಮೂಲಕ ಕಚೇರಿ ತಲುಪಿದ ಸಚಿವ ತೇಜ್ ಪ್ರತಾಪ್ ಯಾದವ್.. - ಬೈಸಿಕಲ್ನಲ್ಲಿ ಕಚೇರಿ ತಲುಪಿದ ತೇಜ್ ಪ್ರತಾಪ್ ಯಾದವ್
ಪಾಟ್ನಾ (ಬಿಹಾರ) : ಅರಣ್ಯ ಪರಿಸರ ಮತ್ತು ಹವಾಮಾನ ಬದಲಾವಣೆ ಸಚಿವ ತೇಜ್ ಪ್ರತಾಪ್ ಯಾದವ್ ಅವರು ಇಂದು ತಮ್ಮ ರಾಬ್ರಿ ನಿವಾಸದಿಂದ ಸೈಕ್ಲಿಂಗ್ ಮೂಲಕ ಅರಣ್ಯ ಇಲಾಖೆ ಕಚೇರಿಯ ಅರಣ್ಯ ಭವನಕ್ಕೆ ತಲುಪಿದ್ದಾರೆ. ಈ ವೇಳೆ, ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಲಾಯಂ ಸಿಂಗ್ ಯಾದವ್ ಅವರು ಬೆಳಗ್ಗೆ ನನ್ನ ಕನಸಿನಲ್ಲಿ ಬಂದಿದ್ದರು. ನಿಮಗೆ ಬಹಳ ಒಳ್ಳೆಯ ಇಲಾಖೆ ಸಿಕ್ಕಿದೆ ಎಂದು ಅವರು ಹೇಳಿದರು ಎಂದರು.
ಬೈಸಿಕಲ್ನಲ್ಲಿ ಕಚೇರಿ ತಲುಪಿದ ತೇಜ್ ಪ್ರತಾಪ್ ಯಾದವ್ : ತೇಜ್ ಪ್ರತಾಪ್ ಯಾದವ್ ಅವರು ತಮ್ಮ ಕನಸ್ಸಿನಲ್ಲಿ ಕಂಡ ಎಲ್ಲ ವಿಷಯಗಳನ್ನು ಹೇಳಿಕೊಂಡರು. ವೃಂದಾವನದಿಂದ ಸೈಕಲ್‌ನಲ್ಲಿ ಹೋಗುತ್ತಿರುವುದಾಗಿ ಕನಸು ಕಂಡೆ. ಸೈಫಾಯಿ ಗ್ರಾಮಕ್ಕೆ ನಾವು ಸೈಕಲ್‌ನಲ್ಲಿ ಅಲ್ಲಿಗೆ ತಲುಪಿದಾಗ, ನೇತಾಜಿ ಅಂದರೆ ಮುಲಾಯಂ ಸಿಂಗ್ ಯಾದವ್ ಅವರು ಹಿಂದೆ ಕುಳಿತಿದ್ದರು. ನನ್ನನ್ನೂ ಅವರ ಜೊತೆ ಕೂರಿಸಿಕೊಂಡು ತುಂಬಾ ಮಾತನಾಡತೊಡಗಿದರು. ಸರಿಯಾಗಿ ಕೆಲಸ ಮಾಡುವುದರ ಜೊತೆಗೆ ಪರಿಸರ ಉಳಿಸಬೇಕು ಎಂದರು. ಅದಕ್ಕೆ ಇವತ್ತು ಸೈಕಲ್ ಏರಿ ಆಫೀಸ್ ತಲುಪಿದ್ದೇನೆ ಎಂದರು. ನಿತ್ಯ ಹೀಗೆ ಮಾಡ್ತೀರಾ? ಎಂಬ ಮಾಧ್ಯಮದವರ ಪ್ರಶ್ನೆಗೆ, ಪರಿಸರ ಉಳಿಸಬೇಕಾದರೆ ಸೈಕಲ್ ತುಳಿಯಬೇಕು ಎಂದರು.
ನೇತಾಜಿ ಅವರು ನಮ್ಮ ಕನಸಿನಲ್ಲಿ ಹೇಳಿದ್ದನ್ನು ನಾವು ಮಾಡಿದ್ದೇವೆ. ನಾವು ನಮ್ಮ ಮಂತ್ರಿಗಳಿಗೆ ಸೈಕಲ್‌ನಲ್ಲಿ ಅವರ ಕಚೇರಿಗಳಿಗೆ ಹೋಗುವಂತೆ ಮನವಿ ಮಾಡುತ್ತೇವೆ. ನೀವು ಪರಿಸರವನ್ನು ಉಳಿಸಲು ಬಯಸಿದರೆ, ನೀವು ಸೈಕಲ್‌ಗಳನ್ನು ಮಾತ್ರ ಬಳಸಬಹುದು ಎಂದು ನಾವು ನಿಮ್ಮಲ್ಲಿ ಮನವಿ ಮಾಡುತ್ತಿದ್ದೇವೆ ಎಂದಿದ್ದಾರೆ.
ಇದನ್ನೂ ಓದಿ :ಪ್ರೀತಿಯ ಪತ್ನಿಯನ್ನು ಪ್ರತಿಮೆಯಲ್ಲಿ ಪೂಜಿಸುವ ಪತಿ; ದಿನಕ್ಕೆರಡು ಬಾರಿ ಆರತಿ!