ಕರ್ನಾಟಕ

karnataka

ನನಗೆ ಜನ ಸೇವೆ ಮಾಡಲು ಇಷ್ಟ ಇದೆ: ಲೋಕಸಭಾ ಚುನಾವಣೆಯ ಸ್ಪರ್ಧೆಗೆ ಸಚಿವ ಎಸ್​.ಎಸ್​ ಮಲ್ಲಿಕಾರ್ಜುನ್​ ಅವರ ಪತ್ನಿ ಪ್ರಭಾ ಇಂಗಿತ

ETV Bharat / videos

ಲೋಕಸಭೆಗೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ ಸಚಿವ ಎಸ್​.ಎಸ್. ಮಲ್ಲಿಕಾರ್ಜುನ್​ ಪತ್ನಿ - ಈಟಿವಿ ಭಾರತ ಕರ್ನಾಟಕ

By

Published : Aug 18, 2023, 6:48 PM IST

Updated : Aug 19, 2023, 12:28 PM IST

ದಾವಣಗೆರೆ:"ನನಗೆ ಜನ ಸೇವೆ ಮಾಡಲು ಇಷ್ಟ ಇದೆ. ನಾವು ಎಸ್ಎಸ್ ಕೇರ್ ಟ್ರಸ್ಟ್ ಮಾಡಿಕೊಂಡು ನಮ್ಮ ಕೈಲಾದ ಸೇವೆ ಮಾಡುತ್ತಿದ್ದೇವೆ" ಎಂದು ಸಚಿವ ಎಸ್​.ಎಸ್. ಮಲ್ಲಿಕಾರ್ಜುನ್​ ಅವರ ಪತ್ನಿ ಪ್ರಭಾ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಇಂಗಿತ ವ್ಯಕ್ತಪಡಿಸಿದರು. ದಾವಣಗೆರೆಯಲ್ಲಿ ವಿಶ್ವ ಛಾಯಾಗ್ರಹಣ ದಿನದ ಅಂಗವಾಗಿ ಛಾಯಾಗ್ರಾಹಕರ ಸಂಘದಿಂದ ಆಯೋಜಿಸಲಾಗಿದ್ದ ಹಳೆ ಕಾಲದ ಕ್ಯಾಮೆರಾ ಪ್ರದರ್ಶನ ಕಾರ್ಯಕ್ರಮದಲ್ಲಿ ಭಾಗವಸಿದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಕಳೆದ 25 ವರ್ಷಗಳಿಂದ ಚುನಾವಣೆ ಸಮಯದಲ್ಲಿ ಶಾಮನೂರು ಶಿವಶಂಕರಪ್ಪಜಿ ಹಾಗೂ ಎಸ್.ಎಸ್. ಮಲ್ಲಿಕಾರ್ಜುನ್ ಪರವಾಗಿ ಪ್ರಚಾರ ಮಾಡುತ್ತಾ ಬಂದಿದ್ದೇನೆ" ಎಂದು ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತೀರಾ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದರು.

"ಶನಿವಾರ ಕ್ಯಾಬಿನೆಟ್​ ಮೀಟಿಂಗ್ ಇರುವುದರಿಂದ ಮಲ್ಲಿಕಾರ್ಜುನ್‌ ದಾವಣಗೆರೆಯಲ್ಲಿ ಉಪಸ್ಥಿತರಿಲ್ಲ. ಹೀಗಾಗಿ ನನಗೆ ಕಾರ್ಯಕ್ರಮಕ್ಕೆ ಬರುವಂತೆ ಆಹ್ವಾನಿಸಿದ್ದರಿಂದ ಇಲ್ಲಿಗೆ ಬಂದಿದ್ದೇನೆ. ದಾವಣಗೆರೆ ಛಾಯಾಗ್ರಾಹಕರ ಸಂಘದಲ್ಲಿ ಸುಮಾರು 184 ವರ್ಷದ ಹಳೇ ಕ್ಯಾಮೆರಾವನ್ನು ಇಟ್ಟುಕೊಂಡಿದ್ದಾರೆ. ಆಗಿನ ಕಾಲದಲ್ಲಿ ಫೋಟೋ ತೆಗೆಯುವುದಕ್ಕೆ ತುಂಬಾ ಕಷ್ಟ ಆಗುತ್ತಿತ್ತು. ಹಳೆ ಕಾಲದ ಕ್ಯಾಮೆರಾ ಪ್ರದರ್ಶನ ವೀಕ್ಷಿಸಿದ್ದು, ಒಳ್ಳೆಯ ಅನುಭವ ನೀಡಿದೆ" ಎಂದು ಹೇಳಿದರು.

ಇದನ್ನೂ ಓದಿ:ನನಗೆ ಕಾಂಗ್ರೆಸ್​ ನಾಯಕರಿಂದ ಯಾವುದೇ ಆಹ್ವಾನ ಬಂದಿಲ್ಲ: ಬಿ.ವಿ.ನಾಯಕ್

Last Updated : Aug 19, 2023, 12:28 PM IST

ABOUT THE AUTHOR

...view details