ಕಾಲ್ತುಳಿತದಿಂದ ಶ್ರೀರಾಮುಲುಗೆ ಗಾಯ.. ಬೆಂಬಲಿಗರ ನೆರವಿನಿಂದ ಕುಂಟುತ್ತಲೇ ನಡೆದ ಸಚಿವ - ಕಂಪ್ಲಿ ಕಾಂಗ್ರೆಸ್ ಶಾಸಕ ಗಣೇಶ
ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕಿನ ಕೋಳೂರು ಏತ ನೀರಾವರಿ ಪುನಶ್ಚೇತನ ಕಾಮಗಾರಿ ಉದ್ಘಾಟನೆ ವೇಳೆ ಸಚಿವ ಶ್ರೀರಾಮುಲು ಅವರ ಕಾಲಿಗೆ ಗಾಯವಾಗಿದೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಶ್ರೀರಾಮುಲು ಬೆಂಬಲಿಗರು ಮತ್ತು ಕಂಪ್ಲಿ ಕಾಂಗ್ರೆಸ್ ಶಾಸಕ ಗಣೇಶ ಬೆಂಬಲಿಗರ ಸಂಖ್ಯೆ ಹೆಚ್ಚಾಗಿದ್ದರಿಂದ ಕಾಲ್ತುಳಿತದಿಂದ ರಾಮುಲು ಅವರ ಕಾಲಿಗೆ ಪೆಟ್ಟಾಗಿದೆ. ಕಾಲು ನೋವಿನಿಂದ ಬಳಲಿದ ಸಚಿವರು ಉದ್ಘಾಟನೆ ಮುಗಿಯೊವರೆಗೂ ಕುಂಟುತ್ತಲೇ ನಡೆದುಕೊಂಡು ಹೋದರು. ಎರಡು ಬಣದ ಮಧ್ಯೆ ಯಾವುದೇ ಗಲಾಟೆ ಸಂಭವಿಸಿಲ್ಲ.
Last Updated : Feb 3, 2023, 8:27 PM IST