ಒಟ್ಟಿಗೆ ಟೆನ್ನಿಸ್ ಆಡಿದ ಸಚಿವ ಲಾಡ್, ಶಾಸಕ ಬೆಲ್ಲದ್: ಅಧಿಕಾರಿಗಳಿಂದ ಸಾಥ್ - etv bharat kannada
Published : Oct 2, 2023, 1:56 PM IST
ಧಾರವಾಡ: ಮಹಾತ್ಮ ಗಾಂಧಿ ಜಯಂತಿ ಹಿನ್ನೆಲೆ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರಿಗಿನ ಗಾಂಧಿ ಪ್ರತಿಮೆಗೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹಾಗೂ ನವಲಗುಂದ ಶಾಸಕ ಎನ್. ಎಚ್. ಕೋನರಡ್ಡಿ ಮಾಲಾರ್ಪಣೆ ಮಾಡಿದರು. ನಂತರ ಇಲ್ಲಿನ ಲಾನ್ ಟೆನ್ನಿಸ್ ಸಂಸ್ಥೆಯ ನೂತನ ಸೌಲಭ್ಯಗಳ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾದ ಸಚಿವ ಸಂತೋಷ್ ಲಾಡ್ ಮತ್ತು ಶಾಸಕ ಅರವಿಂದ ಬೆಲ್ಲದ್ ಒಟ್ಟಿಗೆ ಟೆನ್ನಿಸ್ ಆಟವಾಡಿದರು. ಬಳಿಕ ಮಾಧ್ಯಮದವರೊಂದಿಗೆ ಸಂತೋಷ್ ಲಾಡ್ ಮಾತನಾಡಿ, ನಾಡಿನ ಜನತೆಗೆ ಗಾಂಧಿ ಜಯಂತಿಯ ಶುಭಾಶಯ ಕೋರಿದರು.
ಶಿವಮೊಗ್ಗ ಗಲಾಟೆ ಪ್ರಕರಣ ವಿಚಾರಕ್ಕೆ ಮಾತನಾಡಿ, ಇಂತಹ ಘಟನೆಗೆ ಪ್ರಚೋದನೆ ಕೊಟ್ಟವರ ವಿರುದ್ಧ ಕ್ರಮ ಜರುಗಿಸಲಾಗುವುದು. ಘಟನೆ ಕುರಿತು ಸರ್ಕಾರ ಕ್ರಮ ತೆಗೆದುಕೊಳ್ಳಲಿದೆ ಎಂದು ಸ್ಪಷ್ಟಪಡಿಸಿದರು. I.N.D.I.A ಒಕ್ಕೂಟ ಬ್ಯಾನ್ ಮಾಡಿ ಎಂದು ಉಡಪಿಯ ಪೇಜಾವರ ಶ್ರೀ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಪೇಜಾವರ ಶ್ರೀಗಳು ಯಾಕೆ ಹೀಗೆ ಹೇಳಿದರೋ ಗೊತ್ತಿಲ್ಲ. ಇಂಡಿಯಾ ಎನ್ನುವುದು ಒಂದು ರಾಜಕೀಯ ಒಕ್ಕೂಟ ನಾವು ಸನಾತನ ಧರ್ಮ ವಿರೋಧಿ ಅಂತಾ ಯಾಕೆ ಹೇಳಿದರು ಅನ್ನೋದು ಗೊತ್ತಿಲ್ಲ ಎಂದರು.
ಇದನ್ನೂ ಓದಿ:ಗಾಂಧಿ ಜಯಂತಿ: ರಾಜ್ಘಾಟ್ನಲ್ಲಿ ಪುಷ್ಪನಮನ ಸಲ್ಲಿಸಿದ ಪ್ರಧಾನಿ ಮೋದಿ, ಖರ್ಗೆ