ಸಹಾಯ ಅರಸಿ ಬಂದ ವಿಶೇಷ ಚೇತನ ವಿದ್ಯಾರ್ಥಿ; ಸ್ಥಳದಲ್ಲೇ ನೆರವಿನ ಅಭಯ ನೀಡಿದ ಸಚಿವ ಸಂತೋಷ್ ಲಾಡ್
Published : Jan 10, 2024, 10:52 AM IST
ಧಾರವಾಡ : ಪ್ರತಿಭಾವಂತ ವಿಶೇಷ ಚೇತನ ವಿದ್ಯಾರ್ಥಿಗೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಸಹಾಯಹಸ್ತ ಚಾಚಿದ್ದಾರೆ. ಮೂಲತಃ ಬೆಳಗಾವಿ ಜಿಲ್ಲೆಯ ವಿದ್ಯಾರ್ಥಿ ಸಿದ್ದಪ್ಪ ಅವರಿಗೆ ತ್ರಿಚಕ್ರ ವಾಹನ ಮತ್ತು 25,000 ರೂಪಾಯಿ ಧನಸಹಾಯ ಮಾಡುವುದಾಗಿ ಸಚಿವರು ಭರವಸೆ ನೀಡಿದ್ದಾರೆ.
ಮಂಗಳವಾರ ರಾತ್ರಿ ಸಚಿವ ಸಂತೋಷ್ ಲಾಡ್ ಇರುವ ಧಾರವಾಡದ ಸರ್ಕಿಟ್ ಹೌಸ್ಗೆ ಯುವಕ ಸಿದ್ದಪ್ಪ ತನ್ನ ಸ್ನೇಹಿತರ ಜೊತೆ ಬಂದಿದ್ದ. ಬಳಿಕ ಸಚಿವರನ್ನು ಭೇಟಿ ಮಾಡಿ ನೆರವು ನೀಡುವಂತೆ ಕೋರಿದ್ದರು. ಈ ಸಂಬಂಧ ಸಚಿವರು, ಸಂತೋಷ್ ಲಾಡ್ ಫೌಂಡೇಶನ್ ಅಧ್ಯಕ್ಷ ಆನಂದ್ ಕಲಾಲ್ ಅವರಿಗೆ ಕರೆ ಮಾಡಿ ಈ ಯುವಕನಿಗೆ ತ್ರಿಚಕ್ರ ವಾಹನ ಮತ್ತು 25,000 ರೂಪಾಯಿಯ ಆರ್ಥಿಕ ನೆರವು ನೀಡುವಂತೆ ಹೇಳಿದ್ದಾರೆ. ಅಷ್ಟೇ ಅಲ್ಲದೇ ಸಿದ್ದಪ್ಪನ ಜೊತೆ ಸ್ವಲ್ಪ ಹೊತ್ತು ಮಾತುಕತೆ ನಡೆಸಿ ಕುಟುಂಬದ ಬಗ್ಗೆ ವಿಚಾರಿಸಿದ್ದಾರೆ. ಬಳಿಕ ಫೋನ್ ನಂಬರ್ ನೀಡಿ ಯಾವುದೇ ಸಂದರ್ಭದಲ್ಲಿ ತಮಗೆ ಕರೆ ಮಾಡುವಂತೆ ಸೂಚಿಸಿದ್ದಾರೆ.
ಸಿದ್ದಪ್ಪ ಮೂಲತಃ ಬೆಳಗಾವಿ ಜಿಲ್ಲೆ ಕಿತ್ತೂರು ತಾಲೂಕಿನ ನಿವಾಸಿಯಾಗಿದ್ದಾರೆ. ಸದ್ಯ ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಅಂತಿಮ ವರ್ಷದ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದು, ಉನ್ನತ ಸಾಧನೆ ಮಾಡುವ ಬಯಕೆ ಹೊಂದಿದ್ದಾರೆ.
ಇದನ್ನೂ ಓದಿ :KL Rahul helps Hubli student: ಕಾಲೇಜು ಶುಲ್ಕ ಕಟ್ಟಲಾಗದ ಬಡ ವಿದ್ಯಾರ್ಥಿಗೆ ಧನ ಸಹಾಯ ಮಾಡಿದ ಕೆಎಲ್ ರಾಹುಲ್