ಡಿಸಿಎಂ ಹುದ್ದೆ ಬೇಡಾ ಅಂತಾ ಯಾರಾದ್ರೂ ಸಚಿವರು ಹೇಳಿದ್ದಾರಾ?; ನಮ್ಮ ಬೇಡಿಕೆ ನಿರಂತರ ಎಂದ ಸಚಿವ ರಾಜಣ್ಣ - ಉಪ ಮುಖ್ಯಮಂತ್ರಿ ಹುದ್ದೆ
Published : Jan 10, 2024, 2:01 PM IST
|Updated : Jan 10, 2024, 2:14 PM IST
ಬೆಂಗಳೂರು: ಉಪ ಮುಖ್ಯಮಂತ್ರಿ ಹುದ್ದೆಗಳು ಬೇಡ ಅಂತಾ ಯಾರಾದರೂ ಸಚಿವರು ಹೇಳಿದ್ದಾರಾ ಎಂದು ಸಹಕಾರ ಖಾತೆ ಸಚಿವ ಕೆ ಎನ್ ರಾಜಣ್ಣ ಮತ್ತೆ ಡಿಸಿಎಂ ಹುದ್ದೆಯ ಆಕಾಂಕ್ಷೆ ಕುರಿತು ಪುನರುಚ್ಚರಿಸಿದ್ದಾರೆ. ಇಂದು ಕೆಪಿಸಿಸಿ ಕಚೇರಿ ಬಳಿ ಮಾತನಾಡಿದ ಅವರು, ಮೂರು ಡಿಸಿಎಂ ಹುದ್ದೆ ವಿಚಾರವಾಗಿ ಪ್ರತಿಕ್ರಿಯಿಸುತ್ತ, ಎಲ್ಲರೂ ಮಾಡಬೇಕು ಅಂತಾನೇ ಹೇಳ್ತಿರೋದು. ಮೌನವಾಗಿದ್ದಾರೆ ಎಂದರೆ ಅವರೆಲ್ಲರಿಗೆ ಸಮ್ಮತಿ ಇದೆ ಅಂತ ಅರ್ಥ. ಯಾರೂ ಆಗಬಾರದು ಅಂತ ಹೇಳಿಲ್ಲ. ನಮ್ಮ ಬೇಡಿಕೆ ನಿರಂತರವಾಗಿ ಇರುತ್ತೆ ಎಂದು ತಿಳಿಸಿದರು.
ಕಾಂಗ್ರೆಸ್ ರಾಜ್ಯ ಉಸ್ತುವಾರಿ ಸುರ್ಜೇವಾಲ ಮುಂದೆ ಅಭಿಪ್ರಾಯ ತಿಳಿಸಿದ್ದೇವೆ. ಎಐಸಿಸಿ ಅಧ್ಯಕ್ಷರು ಡಿಸಿಎಂ ಹುದ್ದೆಯ ಪ್ರಸ್ತಾಪ ಇಲ್ಲ ಎಂದು ಹೇಳಿದ್ದಾರೆ. ಅದೇ ಅಂತಿಮ ಆಗಲಿದೆ. ಆದರೆ ನಮ್ಮ ಬೇಡಿಕೆ ನಿರಂತರವಾಗಿ ಇರಲಿದೆ ಎಂದು ಹೇಳಿದರು.
ಮುದ್ದಹನುಮೇಗೌಡ ಜೊತೆ ಚರ್ಚೆ : ಮುದ್ದಹನುಮೇಗೌಡ ಬೆಳಗ್ಗೆ ನನ್ನನ್ನು ಭೇಟಿಯಾಗಿದ್ರು, ಚರ್ಚೆ ಮಾಡಿದ್ದೇವೆ. ಅವರನ್ನು ಪಕ್ಷಕ್ಕೆ ಕರೆದುಕೊಂಡು ಬರಲು ಪ್ರಯತ್ನ ಮಾಡ್ತಿದ್ದೇನೆ. ಇದೊಂದು ಸೌಜನ್ಯದ ಭೇಟಿ ಆಗಿತ್ತು. ಅವರು ಕಾಂಗ್ರೆಸ್ ಸೇರಿದರೆ ಸ್ವಾಗತ ಮಾಡುತ್ತೇನೆ. ಈಗಲೇ ಅಭ್ಯರ್ಥಿ ಅಂತಾ ಹೇಳಕಾಗಲ್ಲ ಎಂದರು.
ಇದನ್ನೂ ಓದಿ:ಕೇಂದ್ರದಿಂದ ದುರುದ್ದೇಶವಿಲ್ಲ; ರಾಜ್ಯದ ಟ್ಯಾಬ್ಲೋ ಕೈಬಿಟ್ಟದ್ದನ್ನು ಸಮರ್ಥಿಸಿಕೊಂಡ ಬಿ ವೈ ವಿಜಯೇಂದ್ರ