ತುರುವೇಕೆರೆ ತಾಲೂಕು ಕಚೇರಿಗೆ ದಿಢೀರ್ ಭೇಟಿ ನೀಡಿದ ಸಚಿವ ಕೃಷ್ಣಬೈರೇಗೌಡ.. - ಸಾರ್ವಜನಿಕರ ಸಮಸ್ಯೆ
Published : Nov 17, 2023, 4:32 PM IST
ತುಮಕೂರು :ತುರುವೇಕೆರೆ ತಾಲೂಕು ಕಚೇರಿಗೆ ಕಂದಾಯ ಸಚಿವ ಕೃಷ್ಣಬೈರೇಗೌಡ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಚಿವರನ್ನು ಕಂಡು ಅಧಿಕಾರಿಗಳು ಕಕ್ಕಾಬಿಕ್ಕಿಯಾದರು. ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಬೆಂಗಳೂರಿನಿಂದ ಹಾಸನಕ್ಕೆ ಹೋಗುತ್ತಿದ್ದ ಸಚಿವರು, ಮಾರ್ಗಮಧ್ಯದಲ್ಲಿ ತುರುವೇಕೆರೆ ತಾಲೂಕು ಕಚೇರಿಗೆ ದಿಢೀರ್ ಭೇಟಿ ನೀಡಿದರು. ಈ ವೇಳೆ ಸಚಿವರ ಮುಂದೆ ರೈತರು ಹಾಗೂ ಸಾರ್ವಜನಿಕರು ಸಾಲು ಸಾಲು ಸಮಸ್ಯೆ ಹೇಳಿಕೊಂಡರು. ಇದೇ ವೇಳೆ, ಜಮೀನಿನಲ್ಲಿ ಓಡಾಡಲು ನಮಗೆ ರಸ್ತೆ ಇಲ್ಲ ಎಂದು ರೈತರೊಬ್ಬರು ಅಳಲು ತೋಡಿಕೊಂಡರು.
ರೈತರೊಬ್ಬರು ಸಮಸ್ಯೆಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ದೂರು ನೀಡಿದಾಗ, ಜನರ ಎದುರೇ ಅಧಿಕಾರಿಗಳಿಗೆ ಸಚಿವರು ಕ್ಲಾಸ್ ತೆಗೆದುಕೊಂಡರು. ಈ ವೇಳೆ ತಹಶೀಲ್ದಾರ್ ಅವರು ಐದು ಬಾರಿ ನೊಟೀಸ್ ನೀಡಿದ್ದೇನೆ ಎಂದು ಉತ್ತರ ನೀಡಿದರು.
ಐದು ನೊಟೀಸ್ ನೀಡಿ ಇನ್ನೂ ಏತಕ್ಕೆ ಕಾಯ್ತಾ ಇದ್ದೀರಿ ಎಂದು ತಹಶೀಲ್ದಾರ್ಗೆ ಸಚಿವರು ಕ್ಲಾಸ್ ತೆಗೆದುಕೊಂಡರು. ಅಲ್ಲದೇ ಈ ಕೂಡಲೇ ದಾರಿ ತೆರವುಗೊಳಿಸುವಂತೆ ತಹಶೀಲ್ದಾರ್ ರೇಣುಕುಮಾರ್ಗೆ ಸೂಚನೆ ನೀಡಿದರು. ಸಾರ್ವಜನಿಕರ ಅಹವಾಲನ್ನು ಸ್ವೀಕರಿಸಿದ ನಂತರ ಸಚಿವ ಕೃಷ್ಣ ಬೈರೇಗೌಡ ಅವರು ಹಾಸನದ ಕಡೆ ಪ್ರಯಾಣ ಬೆಳೆಸಿದರು.
ಇದನ್ನೂ ಓದಿ : ಕಂದಾಯ ಇಲಾಖೆಯಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಮುಂದಾದ ಸಚಿವ ಕೃಷ್ಣಬೈರೇಗೌಡ..