ಶ್ರೀ ಶಿವಕುಮಾರ ಸ್ವಾಮೀಜಿ ಗದ್ದುಗೆ ದರ್ಶನ ಪಡೆದ ಸಚಿವ ಈಶ್ವರ ಖಂಡ್ರೆ - ಸಿದ್ಧಗಂಗಾ ಮಠ
ತುಮಕೂರು:ಸಿದ್ಧಗಂಗಾ ಮಠಕ್ಕೆ ಸಚಿವರಾದ ನಂತರ ಮೊದಲ ಬಾರಿಗೆ ಭೇಟಿ ನೀಡಿದ ಈಶ್ವರ್ ಖಂಡ್ರೆ, ಶ್ರೀ ಶಿವಕುಮಾರ ಶ್ರೀಗಳ ಗದ್ದುಗೆ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಸಿದ್ಧಗಂಗಾ ಮಠಾಧ್ಯಕ್ಷ ಶ್ರೀ ಸಿದ್ಧಲಿಂಗ ಶ್ರೀಗಳ ಆಶಿರ್ವಾದ ಪಡೆದರು. ಖಂಡ್ರೆ ಅವರಿಗೆ ಸ್ಥಳೀಯ ಕಾಂಗ್ರೆಸ್ ನಾಯಕರು ಹಾಗೂ ವೀರಶೈವ ಮುಖಂಡರು ಸಾಥ್ ನೀಡಿದರು.
ಮಠದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ರಾಜ್ಯದ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಜನ ವಸತಿ ಪ್ರದೇಶಗಳಿದ್ದು, ಸಮಿತಿ ರಚನೆ ಮಾಡಿ ಅದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳಲಾಗುವುದು. ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖೆ ಜಂಟಿ ಸಮೀಕ್ಷೆ ನಡೆಸಲಾಗುವುದು ಎಂದು ಅರಣ್ಯ ಮತ್ತು ಪರಿಸರ ಖಾತೆ ಸಚಿವ ಖಂಡ್ರೆ ಹೇಳಿದರು.
ಸಿದ್ಧಗಂಗಾ ಮಠದಲ್ಲಿ ಶ್ರೀ ಸಿದ್ಧಲಿಂಗ ಸ್ವಾಮೀಜಿಯವರ ಆಶೀರ್ವಾದ ಪಡೆದಿದ್ದೇನೆ. ನಮ್ಮ ತಂದೆ ಬೀಮಣ್ಣ ಖಂಡ್ರೆ ಅವರ ಕಾಲದಿಂದಲೂ ಮಠದ ಮೇಲೆ ನಂಬಿಕೆ ಇಟ್ಟಿದ್ದೇವೆ. ಸಿದ್ಧಗಂಗಾ ಮಠಕ್ಕೆ ಬಂದರೆ ಒಂದು ರೀತಿ ಶಾಂತಿ ಸಮಾಧಾನ ಲಭಿಸಲಿದೆ. ಸಿದ್ಧಗಂಗಾ ಮಠದಲ್ಲಿ ಒಂದು ರೀತಿ ಸರ್ವ ಜನಾಂಗದ ಶಾಂತಿಯ ತೋಟ ಎಂಬಂತಹ ಭಾವನೆ ಬರಲಿದೆ ಎಂದು ತಿಳಿಸಿದರು.
ಇದನ್ನೂ ಓದಿ:ಶಿವಮೊಗ್ಗ: ಸಿಡಿಲು ಬಡಿದು ಮಹಿಳೆ ಸಾವು... ತೆಂಗಿನ ಮರ ಬಿದ್ದು ಎರಡು ಕಾರು ಜಖಂ