ಕರ್ನಾಟಕ

karnataka

ಎಲೆಕ್ಟ್ರಿಕ್ ವಾಹನದಲ್ಲಿ ಬಂದ ಆನಂದ್​ ಸಿಂಗ್​ ಕುಟುಂಬ

ETV Bharat / videos

ಎಲೆಕ್ಟ್ರಿಕ್ ವಾಹನದಲ್ಲಿ ಬಂದು ಮತದಾನ ಮಾಡಿದ ಸಚಿವ ಆನಂದ್​ ಸಿಂಗ್ ಕುಟುಂಬ: ವಿಡಿಯೋ - ಸಚಿವ ಆನಂದ್​ ಸಿಂಗ್ ಕುಟುಂಬ

By

Published : May 10, 2023, 5:45 PM IST

ವಿಜಯನಗರ:ಹೊಸಪೇಟೆಯ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಮತಗಟ್ಟೆಯಲ್ಲಿ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್, ಪುತ್ರ ಹಾಗೂ ಬಿಜೆಪಿ ಅಭ್ಯರ್ಥಿ ಸಿದ್ಧಾರ್ಥ್ ಸಿಂಗ್ ಸೇರಿ ಕುಟುಂಬಸ್ಥರು ಮತದಾನ ಮಾಡಿದರು.

ಬ್ಯಾಟರಿಚಾಲಿತ ವಾಹನದಲ್ಲಿ ಮತಚಲಾವಣೆ ಮಾಡಲು ಮತಗಟ್ಟೆಗೆ ಆಗಮಿಸಿದ ಸಿಂಗ್ ಕುಟುಂಬ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿ ಗಮನ ಸೆಳೆದರು. ಆನಂದ್ ಸಿಂಗ್ ಅವರ ತಾಯಿ ಸುನೀತಾ ಬಾಯಿ, ಪತ್ನಿ ಲಕ್ಷ್ಮಿ  ಸಿಂಗ್, ಮಗಳು ವೈಷ್ಣವಿ ಸಿಂಗ್, ಬಿಜೆಪಿ ಅಭ್ಯರ್ಥಿ ಸಿದ್ಧಾರ್ಥ್ ಸಿಂಗ್ ಪತ್ನಿ ಸಂಜನಾ ಸಬರ್ದಾ ಸಿಂಗ್ ಹಕ್ಕು ಚಲಾಯಿಸಿದರು.

ನಂತರ ಮಾತನಾಡಿದ ಆನಂದ್ ಸಿಂಗ್, ಬಿಜೆಪಿ ಪಕ್ಷದಲ್ಲಿ ಯುವಕರಿಗೆ ಹೆಚ್ಚಿನ ಆದ್ಯತೆ ನೀಡಿದ್ದರಿಂದ ಸಿದ್ದಾರ್ಥ್​ ಸಿಂಗ್​ಗೆ ಟಿಕೆಟ್​ ನೀಡಿದೆ. ನನ್ನ ಅನುಭವ ಕೂಡ ಅವರಿಗೆ ಹಂಚಿದ್ದೇನೆ. ಜನ ಖಂಡಿತ ಗೆಲ್ಲಿಸುತ್ತಾರೆ ಎಂಬ ನಂಬಿಕೆ ಇದೆ ಎಂದರು.

ಬಿಜೆಪಿ ಅಭ್ಯರ್ಥಿ ಸಿದ್ಧಾರ್ಥ್​ ಸಿಂಗ್ ಮಾತನಾಡಿ, ಈ ಹಿಂದೆ ಮತದಾರನಾಗಿದ್ದೆ. ಈಗ ಅಭ್ಯರ್ಥಿಯಾಗಿ ಬಿಜೆಪಿಯಿಂದ ಸ್ಪರ್ಧಿಸಿದ್ದೇನೆ. ಇಲ್ಲಿನ ಮತದಾರ ನನಗೆ ಬೆಂಬಲ ನೀಡುತ್ತಾನೆ ಎಂಬ ವಿಶ್ವಾಸವಿದೆ ಎಂದರು.

ಓದಿ:ಮೊದಲ ಮತದಾನದ ಅನುಭವ ಹಂಚಿಕೊಂಡ ಯಡಿಯೂರಪ್ಪ ಮೊಮ್ಮಕ್ಕಳು

ABOUT THE AUTHOR

...view details