ಹೈಗಮ್ ರಖ್ ಜೌಗು ಪ್ರದೇಶಕ್ಕೆ ಆಗಮಿಸುತ್ತಿರುವ ವಲಸೆ ಪಕ್ಷಿಗಳು - nine wetlands in Kashmir
ಸೋಪೋರೆ(ಜಮ್ಮು ಮತ್ತು ಕಾಶ್ಮೀರ): ವಲಸೆ ಹಕ್ಕಿಗಳು ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಸೋಪೋರೆ ಪ್ರದೇಶದಲ್ಲಿರುವ ಹೈಗಮ್ ರಖ್ ಜೌಗು ಪ್ರದೇಶಕ್ಕೆ ಆಗಮಿಸಲು ಪ್ರಾರಂಭಿಸಿವೆ. ಚಳಿಗಾಲದ ಪ್ರಾರಂಭದಲ್ಲೇ ಪಕ್ಷಿಗಳು ಈ ಜಲಮೂಲಕ್ಕೆ ಕಾಲಿಡುತ್ತಿವೆ. ಹೆಚ್ಚಾಗಿ ಇಲ್ಲಿಗೆ ಆಗಮಿಸುವ ಪಕ್ಷಿಗಳೆಂದರೆ ಮಲ್ಲಾರ್ಡ್ಸ್, ಗ್ರೇಲಾಗ್ ಹೆಬ್ಬಾತುಗಳು, ಪೊಚಾರ್ಡ್ಸ್, ಕಾಮನ್ ಟೈಲ್ಸ್, ಶೊವೆಲ್ಲರ್ಸ್, ಪಿನ್‌ಟೇಲ್ಸ್ ಮತ್ತು ಘರ್ವಾಲ್‌ಗಳು ನವೆಂಬರ್ನಿಂದ ಮಾರ್ಚ್ ನಡುವೆ ಭೇಟಿ ನೀಡುತ್ತವೆ. ಕೆಲವೊಮ್ಮೆ ಪಕ್ಷಿಗಳು ಡಿಸೆಂಬರ್ ಅಂತ್ಯದ ವೇಳೆ ಅತೀ ಹೆಚ್ಚು ಸಂಖ್ಯೆಯಲ್ಲಿ ಆಗಮಿಸುತ್ತವಂತೆ. ಯುರೋಪ್, ಮಧ್ಯ ಏಷ್ಯಾ, ಚೀನಾ, ಜಪಾನ್ನಿಂದ ಪಕ್ಷಿಗಳು ಇಲ್ಲಿಗೆ ವಲಸೆ ಬರುತ್ತವೆ.
Last Updated : Feb 3, 2023, 8:34 PM IST