ಕರ್ನಾಟಕ

karnataka

ಅಗ್ನಿ ಅವಘಡ

ETV Bharat / videos

ಮಂಡ್ಯ: ಹೊತ್ತಿ ಉರಿದ ಮೆಡಿಸಿನ್​ ಫಾರ್ಮ್, ಔಷಧ ನಾಶ - medicine farm caught fire in mandya

By

Published : Mar 15, 2023, 10:54 AM IST

ಮಂಡ್ಯ: ವಿದ್ಯುತ್​ ಶಾರ್ಟ್ ಸರ್ಕ್ಯೂಟ್​ನಿಂದಾಗಿ ಮೆಡಿಸಿನ್ ಫಾರ್ಮ್​ವೊಂದು ಹೊತ್ತಿ ಉರಿದ ಘಟನೆ ಮಂಡ್ಯದ ಅಶೋಕ್ ನಗರದಲ್ಲಿ ನಡೆದಿದೆ. ಇಲ್ಲಿನ ಲಕ್ಷಿ ಫಾರ್ಮ್​ಗೆ ಬೆಂಕಿ ಬಿದ್ದಿದ್ದು, ಔಷಧಗಳು ಸಂಪೂರ್ಣ ಸುಟ್ಟು ಭಸ್ಮವಾಗಿವೆ. ಲೋಕನಂದಾ ಎಂಬುವರಿಗೆ ಸೇರಿದ ಫಾರ್ಮ್​ ಇದಾಗಿದ್ದು, ದಸ್ತಾನಿನಲ್ಲಿದ್ದ ಮೆಡಿಸಿನ್ಸ್, ಫ್ರಿಡ್ಜ್, ಮೆಡಿಸಿನ್ ರ್‍ಯಾಕ್​ ಸೇರಿದಂತೆ ಹಲವು ವಸ್ತುಗಳು ಬೆಂಕಿಗೆ ಆಹುತಿಯಾಗಿದೆ. ಸುಮಾರು 1 ಕೋಟಿ 81 ಲಕ್ಷ ರೂಪಾಯಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಮಂಡ್ಯ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

ಇದನ್ನೂ ಓದಿ:ಗುಡಿಸಲಿಗೆ ಬೆಂಕಿ: ಸುಖ ನಿದ್ರೆಯಲ್ಲಿದ್ದ ಮೂವರು ಮಕ್ಕಳು, ದಂಪತಿ ದಾರುಣ ಸಾವು

ಕಳೆದ ಎರಡು ದಿನಗಳ ಹಿಂದಷ್ಟೇ ಮುಂಬೈಯ ಜೋಗೇಶ್ವರಿ ಪ್ರದೇಶದ ರಾಮಮಂದಿರ ಬಳಿಯ ಪೀಠೋಪಕರಣ ಗೋದಾಮಿನಲ್ಲಿ ಅಗ್ನಿ ಅವಘಡ ಸಂಭವಿಸಿತ್ತು. ಈ ಕುರಿತು ಮಾಹಿತಿ ಪಡೆದ ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದವು. 

ಇದನ್ನೂ ಓದಿ:ಪೀಠೋಪಕರಣ​ ಗೋದಾಮಿನಲ್ಲಿ ಭಾರಿ ಬೆಂಕಿ ಅವಘಡ: ಓರ್ವ ಸಾವು

ABOUT THE AUTHOR

...view details