ಧಾರವಾಡದಲ್ಲಿ ರೈತರಿಂದ ಬಾರಕೋಲು ಚಳವಳಿ.. ಸಚಿವರಿಗೆ 24 ಗಂಟೆ ಗಡುವು ನೀಡಿದ ಅನ್ನದಾತರು - ರೈತರು ಬಾರಕೋಲು ಚಳವಳಿ
ಕಬ್ಬಿನ ಬೆಳೆಗಾರರು ನಡೆಸುತ್ತಿರುವ ಧರಣಿ ಇಂದಿಗೆ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಬುಧವಾರ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ರೈತರು ಬಾರಕೋಲು ಚಳವಳಿ ನಡೆಸಿದರು. ಧಾರವಾಡ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲೇ ಬಿಡಾರ ಹೂಡಿರುವ ಕಬ್ಬು ಬೆಳೆಗಾರರು, ಬುಧವಾರ ಮಧ್ಯಾಹ್ನದ ನಂತರ ಬಾರಕೋಲಿನಿಂದ ನೆಲಕ್ಕೆ ಹೊಡೆಯುವ ಮೂಲಕ ಚಳವಳಿ ನಡೆಸಿದರು. ಇಂದು ಸಂಜೆವರೆಗೂ ಸಕ್ಕರೆ ಸಚಿವರು ರೈತರ ಪ್ರತಿಭಟನಾ ಸ್ಥಳಕ್ಕೆ ಬರಬೇಕು. ಅಲ್ಲಿಯವರೆಗೂ ನಮ್ಮ ಪ್ರತಿಭಟನೆ ಮುಂದುವರೆಯುತ್ತದೆ. 24 ಗಂಟೆ ಸಚಿವರಿಗೆ ಗಡುವು ನೀಡಲಾಗುವುದು ಎಂದು ರೈತರು ಎಚ್ಚರಿಕೆ ನೀಡಿದ್ದಾರೆ. ಕಬ್ಬಿಗೆ ಸೂಕ್ತ ಬೆಂಬಲ ಬೆಲೆ ನಿಗದಿ ಮಾಡುವುದು, ಬಾಕಿ ಇರುವ ಕಬ್ಬಿನ ಬಿಲ್‌ನ್ನು ಕೂಡಲೇ ಬಿಡುಗಡೆ ಮಾಡುವುದು ಹಾಗೂ ಹಳಿಯಾಳ ಸಕ್ಕರೆ ಕಾರ್ಖಾನೆಯನ್ನು ಪುನರಾರಂಭಿಸುವಂತೆ ಆಗ್ರಹಿಸಿದರು.
Last Updated : Feb 3, 2023, 8:31 PM IST