ಕರ್ನಾಟಕ

karnataka

ಅಮಿತ್ ಶಾ ಸ್ವಾಗತಕ್ಕೆ ಸಿದ್ದವಾದ ಬೃಹತ್ ಸೇಬಿನ ಹಾರ

ETV Bharat / videos

ಚಿಕ್ಕಬಳ್ಳಾಪುರದಲ್ಲಿ ಅಮಿತ್ ಶಾ ಸ್ವಾಗತಕ್ಕೆ ಸಾವಿರ ಕೆ.ಜಿ ತೂಕದ ಬೃಹತ್ ಸೇಬಿನ ಹಾರ: ವಿಡಿಯೋ - ವಿಧಾನ ಸಭೆ ಚುನಾವಣೆ 2023

By

Published : May 7, 2023, 1:21 PM IST

ಚಿಕ್ಕಬಳ್ಳಾಪುರ:ರಾಜ್ಯ ವಿಧಾನಸಭೆ ಚುನಾವಣೆಯ ಮತದಾನದ ದಿನ ಸಮೀಪಿಸುತ್ತಿದೆ. ವಿವಿಧ ರಾಜಕೀಯ ಪಕ್ಷಗಳ ಘಟಾನುಘಟಿ ನಾಯಕರು, ಸಿನಿಮಾ ರಂಗದ ಖ್ಯಾತ ನಟ, ನಟಿಯರು ಸೇರಿಕೊಂಡು ಅಭ್ಯರ್ಥಿಗಳ ಪರ ಬಿರುಸಿನ ಮತ ಪ್ರಚಾರ ನಡೆಸುತ್ತಿದ್ದಾರೆ. ಇಂದು ಚಿಕ್ಕಬಳ್ಳಾಪುರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್​ ಶಾ ಅವರು ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚನೆ ನಡೆಸಲಿದ್ದಾರೆ.

ನಗರಕ್ಕೆ ಮಧ್ಯಾಹ್ನ 3 ಗಂಟೆಗೆ ಆಗಮಿಸುತ್ತಿರುವ ಅಮಿತ್​ ಶಾ, ಕ್ಷೇತ್ರದ ಅಭ್ಯರ್ಥಿ ಸಚಿವ ಡಾ.ಕೆ.ಸುಧಾಕರ್ ಪರ ಮತಬೇಟೆ ನಡೆಸಲಿದ್ದಾರೆ. ನಗರದ ಒಕ್ಕಲಿಗರ ಭವನದಿಂದ ಮರಳು ಸಿದ್ದೇಶ್ವರ ದೇವಸ್ಥಾನವರಿಗೂ ರೋಡ್ ಶೋ ನಡೆಯಲಿದೆ. ಅಮಿತ್ ಶಾ ಸ್ವಾಗತಕ್ಕೆ ಸಚಿವ ಸುಧಾಕರ್ ಅಭಿಮಾನಿಗಳು 1 ಸಾವಿರ ಕೆ.ಜಿ ತೂಕದ ಬೃಹತ್ ಸೇಬು ಹಣ್ಣಿನ ಹಾರ ಸಿದ್ದಪಡಿಸುತ್ತಿದ್ದಾರೆ. 12 ಮಂದಿ ಕೆಲಸಗಾರರು ಸತತ ಮೂರು ದಿನಗಳಿಂದ ಸಿದ್ದಪಡಿಸುತ್ತಿರುವ ಸೇಬಿನ ಹಾರಕ್ಕೆ‌ ಬೆಂಗಳೂರಿನಿಂದ ಸಾವಿರಾರು ಕಾಶ್ಮೀರಿ ಆ್ಯಪಲ್‌ಗಳನ್ನು ತರಲಾಗಿದೆ. ಈ ಹಾರಕ್ಕೆ 2 ಲಕ್ಷ‌ ರೂಪಾಯಿ ವೆಚ್ಚವಾಗುತ್ತಿದೆ ಎಂದು ತಿಳಿದು ಬಂದಿದೆ. ನಗರದ ಅಸ್ಲಂ ಪಾಶ ನೇತೃತ್ವದಲ್ಲಿ ಹಾರ ರೆಡಿಯಾಗುತ್ತಿದೆ. 

ಇದನ್ನೂ ಓದಿ:ಬೆಳಗಾವಿಯಲ್ಲಿ ಅಮಿತ್ ಶಾ ರೋಡ್ ಶೋ: ವಿಡಿಯೋ

ABOUT THE AUTHOR

...view details