ಬಾಲ್ಯ ವಿವಾಹದ ವಿರುದ್ಧ ಅಸ್ಸಾಂನಲ್ಲಿ ಶಿಸ್ತು ಕ್ರಮ: ಮೌಲಾನಾ, ಪೂಜಾರಿಗಳು ಸೇರಿ 2044 ಜನರ ಬಂಧನ - etv bharat kannada
ಗುಹಾವಟಿ (ಅಸ್ಸಾಂ): ಬಾಲ್ಯ ವಿವಾಹ ಪ್ರಕರಣಗಳ ವಿರುದ್ಧ ದಿಟ್ಟ ಕ್ರಮಕ್ಕೆ ಮುಂದಾಗಿರುವ ಅಸ್ಸಾಂ ಸರ್ಕಾರ, 18 ವರ್ಷದೊಳಗಿನ ಬಾಲಕಿಯರನ್ನು ಮದುವೆಯಾದ ಎರಡು ಸಾವಿರಕ್ಕೂ ಹೆಚ್ಚು ಪುರುಷರನ್ನು ಒಂದೇ ದಿನದಲ್ಲಿ ಬಂಧಿಸಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಡಿಜಿಪಿ ಜಿ.ಪಿ.ಸಿಂಗ್, ಬಾಲ್ಯ ವಿವಾಹಗಳಿಗೆ ಸಂಬಂಧಿಸಿದಂತೆ ಕಳೆದ ಎರಡು ದಿನಗಳಲ್ಲಿ ರಾಜಾದ್ಯಂತ ಒಟ್ಟು 4004 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಈ ಪೈಕಿ ಇದುವರೆಗೆ 2044 ಜನರನ್ನು ಬಂಧಿಸಲಾಗಿದೆ. ಬಂಧಿತರಲ್ಲಿ 52 ಕಾಜಿಗಳು, ಮೌಲಾನಾಗಳು ಹಾಗೂ ಪೂಜಾರಿಗಳು ಸೇರಿದ್ದಾರೆ ಎಂದು ತಿಳಿಸಿದ್ದಾರೆ.
ಸಿಎಂ ಹಿಮಂತ್ ಬಿಸ್ವಾ ಶರ್ಮಾ ನಿರ್ದೇಶನದ ಮೇರೆಗೆ ಬಾಲ್ಯ ವಿವಾಹಗಳಿಗೆ ಕುರಿತಂತೆ ಕಳೆದ ಎರಡು ತಿಂಗಳಿಂದ ತನಿಖೆ ನಡೆಸಲಾಗಿದೆ. 2020, 2021 ಮತ್ತು 2022ರ ಸಾಲಿನಲ್ಲಿ ನಡೆದ ವಿವಾಹಗಳ ಮಾಹಿತಿಯನ್ನು ಕಲೆ ಹಾಕಲಾಗಿದೆ. ಇದರಲ್ಲಿ 12, 13 ವರ್ಷದ ವಯಸ್ಸಿನ ಬಾಲಕಿಯರು ಸಹ ಗರ್ಭಿಣಿಯಾಗಿದ್ದಾರೆ ಎಂದು ಡಿಜಿಪಿ ಮಾಹಿತಿ ನೀಡಿದ್ದಾರೆ.
ಬಾಲ್ಯ ವಿವಾಹ ಪ್ರಕರಣದಲ್ಲಿ ಬಹುತೇಕ ಪ್ರಕರಣಗಳನ್ನು ಪೋಕ್ಸೋ ಕಾಯ್ಡೆಅಡಿ ದಾಖಲಿಸಿಕೊಳ್ಳಲಾಗಿದೆ ಮತ್ತು ಇದೇ ಕಾಯ್ದೆಯಡಿ ಆರೋಪಿಗಳನ್ನು ಬಂಧಿಸಲಾಗಿದೆ. ಒಟ್ಟಾರೆ, ಇದರಲ್ಲಿ 8 ಸಾವಿರ ಜನರು ಭಾಗಿಯಾಗಿರುವ ಶಂಕೆ ಇದ್ದು, ಬಂಧಿತ ಎಲ್ಲರನ್ನೂ ಕೋರ್ಟ್ ಮುಂದೆ ಹಾಜರು ಪಡಿಸಲಿದ್ದೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಬಾಲ್ಯ ವಿವಾಹಗಳ ವಿರುದ್ಧ ಅಸ್ಸಾಂನಲ್ಲಿ ಕಠಿಣ ಕ್ರಮ: 10 ದಿನದಲ್ಲಿ 4 ಸಾವಿರ ಕೇಸ್ ದಾಖಲು
TAGGED:
child marriage in Assam