ಕರ್ನಾಟಕ

karnataka

ಗರ್ಭಿಣಿಯರಿಗೆ ಸಾಮೂಹಿಕ ಸೀಮಂತ

ETV Bharat / videos

ಗದಗ: 25 ಗರ್ಭಿಣಿಯರಿಗೆ ಸಾಮೂಹಿಕ ಸೀಮಂತ

By ETV Bharat Karnataka Team

Published : Oct 21, 2023, 10:58 PM IST

ಗದಗ: ಗದಗ ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ನವರಾತ್ರಿ ಅಂಗವಾಗಿ ದಂಡಿನ ದುರ್ಗಾದೇವಿ ಸೇವಾ ಸಮಿತಿಯ ಆಶ್ರಯದಲ್ಲಿ ಹಾಗೂ ಸ್ತ್ರೀಶಕ್ತಿ ಸಂಘಗಳು ಮತ್ತು ಸ್ವಸಹಾಯ ಸಂಘಗಳ ಸಹಕಾರದೊಂದಿಗೆ ದುರ್ಗಾದೇವಿ ದೇವಸ್ಥಾನದಲ್ಲಿ 25 ಗರ್ಭಿಣಿಯರಿಗೆ ಸಾಮೂಹಿಕ ಸೀಮಂತ ನೆರವೇರಿಸಲಾಯಿತು. ಸಂಪ್ರದಾಯದಂತೆ ಗರ್ಭಿಣಿಯರಿಗೆ ಅರಿಶಿನ, ಕುಂಕುಮ, ಬಳೆ, ಉತ್ತತ್ತಿ ಕುಪ್ಪಸದೊಂದಿಗೆ  ಉಡಿ ತುಂಬಿ ಆರತಿ ಮಾಡಲಾಯಿತು. ಈ ಸಂದರ್ಭದಲ್ಲಿ ಸೋಬಾನ ಪದ ಕೂಡ ಹಾಡಲಾಯಿತು. 

ಇದರಂಗವಾಗಿ ದೇವಿಯ ಕುರಿತು ಭರತನಾಟ್ಯ ಬಾಲಕಿಯಿಂದ ನಡೆಯಿತು. ಇನ್ನು ವಿಶೇಷ ಖಾದ್ಯವಾದ ಹೋಳಿಗೆ, ರೊಟ್ಟಿ, ಪೈಸಾ, ಸಂಡಿಗೆ, ಅನ್ನ, ಸಾರನ್ನು ಗರ್ಭಿಣಿಯರಿಗೆ ಬಡಿಸಲಾಯಿತು. ಸಾವಿರಕ್ಕೂ ಹೆಚ್ಚು ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಸಾಮೂಹಿಕ ಸೀಮಂತ ಕಾರ್ಯಕ್ರಮದಲ್ಲಿ ವಿಶೇಷವಾಗಿ ಮುಸ್ಲಿಂ ಮಹಿಳೆಯು ಸಹ ಸೀಮಂತ ಮಾಡಿಸಿಕೊಂಡಿದ್ದು ವಿಶೇಷವಾಗಿತ್ತು. ಹೀಗಾಗಿ ಇದೊಂದು ಭಾವೈಕ್ಯತೆಯ ಬಿಂಬಿಸುವ ಸಾಮೂಹಿಕ ಸೀಮಂತ ಕಾರ್ಯಕ್ರಮವಾಗಿದ್ದು. ರಾಜ್ಯದಲ್ಲಿ ನವರಾತ್ರಿ ಹಬ್ಬದಲ್ಲಿ ಈ ಸಾಮೂಹಿಕ ಸೀಮಂತ ಕಾರ್ಯಕ್ರಮ ವಿಶೇಷವೆನಿಸಿತು.

ಕೆಲದಿನಗಳ ಹಿಂದೆ ಕಾರವಾರದಲ್ಲಿ ಸ್ವತಃ ಜಿಲ್ಲಾಧಿಕಾರಿಯೇ ತಮ್ಮ‌ ಕಚೇರಿಯಲ್ಲಿ ಐವರು ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ ಆಯೋಜಿಸುವ ಮೂಲಕ ಚೊಚ್ಚಲ ಹೆರಿಗೆ ಸಂತಸವನ್ನು ಇಮ್ಮಡಿಗೊಳಿಸಿದ್ದರು. 

ಇದನ್ನೂ ಓದಿ:ಉತ್ತರ ಕನ್ನಡ: ಚೊಚ್ಚಲ ಗರ್ಭಿಣಿಯರಿಗೆ ಸೀಮಂತ ಶಾಸ್ತ್ರ ಮಾಡಿದ ಜಿಲ್ಲಾಧಿಕಾರಿ

ABOUT THE AUTHOR

...view details