ಅದ್ದೂರಿಯಾಗಿ ನಡೆದ ಮಣ್ಣೂರು ಯಲ್ಲಮ್ಮ ದೇವಿ ಜಾತ್ರೆ - ವಿಡಿಯೋ - ದೇವಿ ಜಾತ್ರೆ
ಕಲಬುರಗಿ:ಕಲ್ಯಾಣ ಕರ್ನಾಟಕ ಭಾಗದ ಪ್ರಮುಖ ದೇಗುಲಗಳಲ್ಲಿ ಒಂದಾದ ಮಣ್ಣೂರು ಯಲ್ಲಮ್ಮ ದೇವಿ ಜಾತ್ರೆ ಲಕ್ಷಾಂತರ ಭಕ್ತರ ಮದ್ಯೆ ಅದ್ದೂರಿಯಾಗಿ ನೇರವೇರಿತು. ಭೀಮಾ ನದಿಯಲ್ಲಿ ನೆಲೆಸಿರುವ ದೇವಿಯ ಜಾತ್ರೆ ಪ್ರತಿ ವರ್ಷ ಐದು ದಿನಗಳ ಕಾಲ ಭವ್ಯವಾಗಿ ನೇರವೇರುತ್ತದೆ.
ವಿಶೇಷ ಪೂಜೆ ಕಾರ್ಯಗಳು ಜಾತ್ರೆಯು ಐದು ದಿನ ಜರುಗುತ್ತವೆ. ಇನ್ನು ಹುಣ್ಣಿಮೆ ದಿನದಂದು ಪಲ್ಲಕ್ಕಿ ಮೆರವಣಿಗೆ ವಿಶೇಷವಾಗಿರುತ್ತೆ. ಪಲ್ಲಕ್ಕಿಯಲ್ಲಿ ಊರಿನಿಂದ ಯಲ್ಲಮ್ಮ ದೇವಿ ಉತ್ಸವ ಮೂರ್ತಿ ಭೀಮಾ ನದಿಯ ದೇಗುಲವರೆಗೆ ತರಲಾಗುತ್ತೆ. ವಿಶಿಷ್ಟವಾದ ನಂದಿಕೊಲು, ಡೊಳ್ಳು, ಬಾಜಾ ಭಜಂತ್ರಿ, ಡಿಜೆ ಹಾಡಿಗೆ ಕುಣಿತ ಹೀಗೆ ವಿವಿಧ ವಾದ್ಯ ಮೇಳದೊಂದಿಗೆ ಸಂಜೆ ಗ್ರಾಮದಿಂದ ಹೊರಟ ಮೆರವಣಿಗೆ ತಡರಾತ್ರಿ ದೇಗುಲ ತಲುಪಿತು.
ಪಲ್ಲಕ್ಕಿ ಹೋಗುವಾಗ ಅಡ್ಡ ಮಲಗುವದು ಇಲ್ಲಿನ ಸಾಂಪ್ರದಾಯ. ಪಲ್ಲಕ್ಕಿ ಹೊತ್ತವರ ಪಾದಸ್ಪರ್ಶದಿಂದ ರೋಗ ರುಜಿನ ಸಕಲ ಕಷ್ಟ ನಷ್ಟಗಳು ದೂರಾವಾಗುತ್ತೆ ಎನ್ನುವ ನಂಬಿಕೆ ಇಲ್ಲಿನ ಭಕ್ತರದ್ದು. ಹೀಗಾಗಿ ಪಲ್ಲಕ್ಕಿ ಹೋಗುವಾಗ ಅಡ್ಡ ಮಲಗಿ ಪಲ್ಲಕ್ಕಿ ಹೊತ್ತವರಿಂದ ತುಳಿಸಿಕೊಳ್ತಾರೆ. ಕರ್ನಾಟಕ, ಪಕ್ಕದ ಮಹಾರಾಷ್ಟ್ರ, ತೆಲಂಗಾಣ ಆಂಧ್ರದಿಂದ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವಿ ದರ್ಶನ ಪಡೆದರು.
ಇದನ್ನೂ ಓದಿ:ದಶಾಶ್ವಮೇಧ ಘಾಟ್‌ನಲ್ಲಿ ತಾಯಿ ಹೀರಾಬೆನ್ ಪಿಂಡ ದಾನ ಮಾಡಿದ ಪ್ರಧಾನಿ ಮೋದಿ ಸಹೋದರ