ಮಣ್ಣೆತ್ತಿನ ಅಮಾವಾಸ್ಯೆ- ಮಾದಪ್ಪನ ಬೆಟ್ಟದಲ್ಲಿ ನಾರಿಯರ ದಂಡು: ವಿಡಿಯೋ
ಚಾಮರಾಜನಗರ:ಕರ್ನಾಟಕ ರಾಜ್ಯ ಸರ್ಕಾರ ಶಕ್ತಿ ಯೋಜನೆ ಜಾರಿಗೊಳಿಸಿದ ಬಳಿಕ ದೇಗುಲಗಳಿಗೆ ಬರುವ ಮಹಿಳೆಯರ ಸಂಖ್ಯೆ ದುಪ್ಪಟ್ಟಾಗಿದೆ. ರಾಜ್ಯದ ಪ್ರಮುಖ ಯಾತ್ರಾ ಸ್ಥಳಗಳಲ್ಲಿ ಒಂದಾದ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಮಹಿಳಾ ಜಾತ್ರೆಯೇ ಸೇರಿದೆ. ಮಣ್ಣೆತ್ತಿನ ಅಮಾವಾಸ್ಯೆಗೆ ಶಕ್ತಿ ಯೋಜನೆ ಸಾಥ್ ಕೊಟ್ಟಿದ್ದು, ಮಹಿಳಾ ಸಾಗರವೇ ಕ್ಷೇತ್ರದಲ್ಲಿ ಸೇರಿದೆ.
ಮಣ್ಣೆತ್ತಿನ ಅಮಾವಾಸ್ಯೆಗೆ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶಕ್ತಿ ಯೋಜನೆಯ ಮೊದಲ ಅಮಾವಾಸ್ಯೆಯಲ್ಲಿ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಕೊಳ್ಳೇಗಾಲದಿಂದ ಈ ಬಾರಿ ಸಾಕಷ್ಟು ಬಸ್ಗಳನ್ನು ಹಾಕಿದ್ದರೂ ಸಹ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಆಗಮಿಸಿದ್ದಾರೆ. ಶನಿವಾರ ಬಸ್ವೊಂದರ ಡೋರ್ ಕಿತ್ತು ಬಂದ ಘಟನೆಯೂ ನಡೆದಿತ್ತು.
ಶಕ್ತಿ ಯೋಜನೆ:ಕಾಂಗ್ರೆಸ್ ಸರ್ಕಾರದ ಬಹು ನಿರೀಕ್ಷಿತ ಐದು ಗ್ಯಾರಂಟಿಗಳ ಪೈಕಿ ಮೊದಲನೆಯದಾಗಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಕಲ್ಪಿಸುವ ಶಕ್ತಿ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಜೂ. 11ರಂದು ಚಾಲನೆ ನೀಡಿದ್ದರು. ಅಂದು ಮಧ್ಯಾಹ್ನದಿಂದ ರಾಜ್ಯದ ಮಹಿಳೆಯರು ಕೆಎಸ್ಆರ್ ಟಿಸಿ ಹಾಗೂ ಬಿಎಂಟಿಸಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದಾಗಿತ್ತು. ಉಚಿತ ಪ್ರಯಾಣ ಯೋಜನೆಯು ಪ್ರತಿದಿನ 41.8 ಲಕ್ಷಕ್ಕೂ ಹೆಚ್ಚು ಮಹಿಳೆಯರಿಗೆ ಅನುಕೂಲವಾಗಲಿದೆ. 18,609 ಬಸ್‌ಗಳ ಸೇವೆಯು ಉಚಿತ ಪ್ರಯಾಣಕ್ಕೆ ಲಭ್ಯವಿದೆ. ಈ ಯೋಜನೆಗೆ ವಾರ್ಷಿಕ 4051.56 ಕೋಟಿ ರೂ. ವೆಚ್ಚವಾಗಲಿದೆ ಎಂದು ಸರ್ಕಾರ ಅಂದಾಜಿಸಿದೆ.
ಇದನ್ನೂ ಓದಿ:Shakti Scheme: ಶಕ್ತಿ ಯೋಜನೆಗೆ ಸಿಗ್ತಿದೆ ಉತ್ತಮ ಸ್ಪಂದನೆ: ಮಹಿಳೆಯರು, ಮಕ್ಕಳ ಸುರಕ್ಷತೆಗೆ ಗಮನಹರಿಸಲು ಮನವಿ