ಭಾರಿ ಮಳೆಯಿಂದಾಗಿ 25 ವರ್ಷದ ಬಳಿಕ ಉಕ್ಕಿ ಹರಿದ ಭೀಮಾ ನದಿ - ಮಂಡ್ಯ ಜಿಲ್ಲೆಯಲ್ಲಿ ಮಳೆಯ ಆರ್ಭಟ
ಮಂಡ್ಯ ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು, ಮಳವಳ್ಳಿ ಭಾಗದ ಕೆಲವು ಪ್ರದೇಶಗಳು ಜಲಾವೃತಗೊಂಡಿದೆ. ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ 25 ವರ್ಷದ ಬಳಿಕ ಭೀಮಾ ನದಿ ಉಕ್ಕಿ ಹರಿಯುತ್ತಿದೆ. ಮಳೆಯ ಪರಿಣಾಮವಾಗಿ ನೂರಾರು ಎಕರೆಗಳಿಗೆ ನೀರು ನುಗ್ಗಿದ್ದು, ಬೆಳೆ ನಾಶವಾಗಿದೆ. ಮಳೆಯಿಂದಾಗಿ ತೋಟದಲ್ಲಿ ಸಾಕಿದ್ದ 45 ಕುರಿ, ಒಂದು ಹಸು ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ. ಮನೆಗಳಿಗೂ ನೀರು ನುಗ್ಗಿದ್ದು, ತೆಪ್ಪದ ಸಹಾಯದಿಂದ ಮನೆಯಲ್ಲಿದ್ದ ಕಾರ್ಮಿಕ ಹಾಗೂ 3 ಹಸುಗಳನ್ನು ರಕ್ಷಣೆ ಮಾಡಲಾಗಿದೆ.
Last Updated : Feb 3, 2023, 8:27 PM IST