ಕರ್ನಾಟಕ

karnataka

ETV Bharat / videos

ಬೆಂಗಳೂರಲ್ಲಿ ಮೀನು ವ್ಯಾಪಾರಿ ಮೇಲೆ ಲಾಂಗ್​ ಬೀಸಲು ಯತ್ನ: ಸಿಸಿಟಿವಿ ದೃಶ್ಯ - etv bharat kannada

By

Published : Dec 18, 2022, 11:37 AM IST

Updated : Feb 3, 2023, 8:36 PM IST

ಬೆಂಗಳೂರು: ನಗರದಲ್ಲಿ ಪುಂಡರ ಅಟ್ಟಹಾಸ ಮಿತಿ ಮೀರಿದೆ. ಇತ್ತೀಚೆಗೆ ಬೇಕರಿ ಮಾಲೀಕನ ಮೇಲೆ ಹಲ್ಲೆ ನಡೆಸಿದ ಪ್ರಕರಣ ಮಾಸುವ ಮುನ್ನವೇ ಮೀನು ವ್ಯಾಪಾರಿ ಮೇಲೆ ಮಾರಕಾಸ್ತ್ರ ಬೀಸಲು ಯತ್ನಿಸಿದ ಘಟನೆ ಬಾಣಸವಾಡಿಯ ಜೈಭಾರತ್ ನಗರದಲ್ಲಿ ನಡೆದಿದೆ. ಹಫ್ತಾ ಕೊಡಲಿಲ್ಲ ಎಂದು ರೊಚ್ಚಿಗೆದ್ದ ಪುಂಡನೊಬ್ಬ ಮೀನು ವ್ಯಾಪಾರಿಯತ್ತ ಲಾಂಗ್ ಬೀಸಿದ್ದಾನೆ. ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಸುದೇಶ್ ಎಂಬಾತನನ್ನು ಬಂಧಿಸಲಾಗಿದೆ.
Last Updated : Feb 3, 2023, 8:36 PM IST

ABOUT THE AUTHOR

...view details