ಕರ್ನಾಟಕ

karnataka

ಅರಣ್ಯದಲ್ಲಿ ಮರ ಕಡಿದ ಆರೋಪ: ವ್ಯಕ್ತಿಗೆ ಗುಂಡಿಕ್ಕಿ ಹತ್ಯೆ ಮಾಡಿದ ಮಾವೋವಾದಿಗಳು

ETV Bharat / videos

ಅರಣ್ಯದಲ್ಲಿ ಮರ ಕಡಿದ ಆರೋಪ: ವ್ಯಕ್ತಿಗೆ ಗುಂಡಿಕ್ಕಿ ಹತ್ಯೆ ಮಾಡಿದ ಮಾವೋವಾದಿಗಳು - ಮಾವೋವಾದಿಗಳು

By

Published : Mar 18, 2023, 7:31 PM IST

ನಬರಂಗಪುರ (ಒಡಿಶಾ): ಅರಣ್ಯದಲ್ಲಿ ಮರ ಕಡಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಮಾವೋವಾದಿಗಳು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಒಡಿಶಾದ ನಬರಂಗಪುರ ಜಿಲ್ಲೆಯಲ್ಲಿ ಶನಿವಾರ ನಡೆದಿದೆ. ಇಲ್ಲಿನ ರಾಯಗಢ ಪೊಲೀಸ್ ಠಾಣೆ ವ್ಯಾಪ್ತಿಯ ಲಕ್ಷ್ಮಣಪುರ ಗ್ರಾಮದ ನಿವಾಸಿ ನಾರಾಯಣ ನಾಗೇಶ್ (38) ಎಂಬುವವರೇ ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ.  

ಕಳೆದ ಫೆಬ್ರವರಿ 23ರಂದು ಹಟಿಗಾಂವ್‌ನ ಖಲೇಪಾರ ಗ್ರಾಮದಲ್ಲಿ ಚಂದನ್ ಮಲ್ಲಿಕ್ (35) ಎಂಬಾತನನ್ನು ಮಾವೋವಾದಿಗಳು ಕೊಲೆ ಮಾಡಿದ್ದರು. ಅದಲ್ಲದೇ, 10 ದಿನಗಳ ಹಿಂದೆ ಸಮಂತಾ ಚಾಮೆಂಡಾ ಗ್ರಾಮದಲ್ಲಿ ಛತ್ತೀಸ್‌ಗಢ ಮೂಲದ ನಾರದ ಮಾರ್ಕಮ್ (45) ಎಂಬಾತನನ್ನು ಹತ್ಯೆ ಮಾಡಿದ್ದರು. ಇದರ ಬೆನ್ನಲ್ಲೇ ಮಾವೋವಾದಿಗಳು ಮತ್ತೆ ಅಟ್ಟಹಾಸ ಮರೆದಿದ್ದಾರೆ.  

ಲಕ್ಷ್ಮಣಪುರ ಗ್ರಾಮದಲ್ಲಿ ಮನೆಗೆ ನುಗ್ಗಿ ನಾರಾಯಣ ನಾಗೇಶ್​ ಮೇಲೆ ಗುಂಡು ಹಾರಿಸಿ ಮಾವೋವಾದಿಗಳು ಕೊಲೆ ಮಾಡಿದ್ದಾರೆ. ಜೊತೆಗೆ ಶವದ ಪಕ್ಕದಲ್ಲಿ ಪೋಸ್ಟರ್​ವೊಂದು ಎಸೆದಿದ್ದಾರೆ. ಅರಣ್ಯ ಕಡಿದು ಗ್ರಾಮ ಸ್ಥಾಪಿಸಿದ ಆರೋಪದ ಮೇಲೆ ಮರಣದಂಡನೆ ವಿಧಿಸಲಾಗಿದೆ. ಜಂಗಲ್​ ಮಾಫಿಯಾದ ಕಾರಣಕ್ಕೆ ಈ ಹತ್ಯೆ ಮಾಡಲಾಗಿದೆ ಎಂದು ಮೈನ್‌ಪುರ್-ನುಪ್ಪಾದ ವಿಭಾಗೀಯ ಸಮಿತಿ (ಮಾವೋವಾದಿ)ಯ ಹೆಸರಿನ ಪೋಸ್ಟರ್‌ನಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ:ಛತ್ತೀಸ್‌ಗಢದಲ್ಲಿ ನಿಲ್ಲದ ನಕ್ಸಲ್​ ಅಟ್ಟಹಾಸ.. ಒಂದೇ ವಾರದಲ್ಲಿ ಮೂವರು ಬಿಜೆಪಿ ಮುಖಂಡರ ಹತ್ಯೆ

ABOUT THE AUTHOR

...view details