ಕರ್ನಾಟಕ

karnataka

ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿ ಮೇಲೆ ಗ್ಯಾಂಗ್​ನಿಂದ ಹಲ್ಲೆ

ETV Bharat / videos

ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿ ಮೇಲೆ ಗ್ಯಾಂಗ್​ನಿಂದ ಹಲ್ಲೆ: ಸಿಸಿಟಿವಿ ದೃಶ್ಯ - ಬೆಂಡಿಗೇರಿ ಪೊಲೀಸ್ ಠಾಣಾ ವ್ಯಾಪ್ತಿ

By

Published : Mar 7, 2023, 2:14 PM IST

ಹುಬ್ಬಳ್ಳಿ:ಕ್ಷುಲ್ಲಕ ಕಾರಣಕ್ಕಾಗಿ ವ್ಯಕ್ತಿಯೋರ್ವನ ಮೇಲೆ ಯುವಕರ ಗ್ಯಾಂಗ್ ಹಲ್ಲೆ ಮಾಡಿದ ಘಟನೆ ಹುಬ್ಬಳ್ಳಿಯ ಯಲ್ಲಾಪುರ ಓಣಿಯ ಮೆಹಬೂಬ್ ನಗರದಲ್ಲಿ ನಡೆದಿದೆ. ಘಟನೆಯ ದೃಶ್ಯ ಅಂಗಡಿಯ ಹೊರಗಿನ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಮೈನೂ ಪೌಡಲ್ ಎಂಬಾತನ‌ ಮೇಲೆ ಸಮೀರ್ ತಹಶಿಲ್ದಾರ ಎಂಬ ವ್ಯಕ್ತಿ ಹಾಗೂ ಆತನ ಸಹಚರರು ಹಲ್ಲೆ ಮಾಡಿದ್ದಾರೆ. ಇಲ್ಲಿನ ಮೆಹಬೂಬ್ ನಗರದಲ್ಲಿನ ಮೆಡಿಕಲ್ ಶಾಪ್ ಬಂದ್ ಮಾಡಿಕೊಂಡು ಮನೆಗೆ ತೆರಳುತ್ತಿದ್ದಾಗ ಅಲ್ಲಿಗೆ ಬಂದ ಸಮೀರ್ ಹಾಗೂ ಆತನ ಸಹಚರರು ಸೇರಿ ಮೈನೂ ಜಗಳ ಪ್ರಾರಂಭಿಸಿದ್ದರು. ಹಲ್ಲೆಗೆ ಕಾರಣವೇನು ಎಂಬುದು ಸದ್ಯಕ್ಕೆ ತಿಳಿದುಬಂದಿಲ್ಲ. ಮೊದಲು ಓರ್ವ ವ್ಯಕ್ತಿ ವಾಹನದಿಂದ ಇಳಿದು ಮಾತಿನ ಚಕಮಕಿ ನಡೆಸುತ್ತಿರುವುದನ್ನು ಕಾಣಬಹುದು. ಬಳಿಕ ಹಲ್ಲೆ ನಡೆದಿದೆ.

ಗಂಭೀರವಾಗಿ ಗಾಯಗೊಂಡಿದ್ದ ಮೈನೂ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಕುರಿತಂತೆ ಬೆಂಡಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. 

ಇದನ್ನೂ ನೋಡಿ:ವಿಜಯ ಸಂಕಲ್ಪ ಯಾತ್ರೆಗೆ ಪ್ರತಿಭಟನೆ ಬಿಸಿ: ಗುತ್ತೇದಾರ್​ ಸಹೋದರರಿಂದ ಟಿಕೆಟ್​ ಪೈಪೋಟಿ

ABOUT THE AUTHOR

...view details