ಕರ್ನಾಟಕ

karnataka

ಅಳಿವಿನಂಚಿನಲ್ಲಿರುವ 'ಚಿಪ್ಪು ಹಂದಿ' ಅಕ್ರಮ ಸಾಗಾಟ: ಆರೋಪಿ ಬಂಧನ

By

Published : Apr 3, 2023, 8:22 AM IST

ಚಿಪ್ಪುಹಂದಿ

ಭುವನೇಶ್ವರ (ಒಡಿಶಾ): ಅಳಿವಿನಂಚಿನಲ್ಲಿರುವ ವನ್ಯಜೀವಿ ಚಿಪ್ಪು ಹಂದಿ (ಪ್ಯಾಂಗೋಲಿನ್)ಯನ್ನು ಹಿಡಿದು ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ಅರಣ್ಯ ಇಲಾಖೆಯೊಂದಿಗೆ ಜಂಟಿ ಕಾರ್ಯಾಚರಣೆಯಲ್ಲಿ ಒಡಿಶಾ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಮತ್ತು ಬಾರ್‌ಗಢ ಅರಣ್ಯ ವಿಭಾಗದ ಅರಣ್ಯ ಅಧಿಕಾರಿಗಳು ಬಂಧಿಸಿದ್ದಾರೆ. ಮಹದೇವ್ ಮುಟ್ಕಿಯಾ ಬಂಧಿತ ಆರೋಪಿ.

ಖಚಿತ ಮಾಹಿತಿ ಮೇರೆಗೆ ಎಸ್‌ಟಿಎಫ್ ತಂಡ ಏ.1 ರಂದು ಬರ್ಗಢ್‌ನ ಪದ್ಮಾಪುರ್ ಪಿಎಸ್ ವ್ಯಾಪ್ತಿಯ ಬಿಜಾದಿಹಿ ಚೌಕದ ಬಳಿ ದಾಳಿ ನಡೆಸಿತ್ತು. ಶೋಧದ ಸಮಯದಲ್ಲಿ ಆರೋಪಿಯಿಂದ 12 ಕೆ.ಜಿ ತೂಕದ ಜೀವಂತ ಚಿಪ್ಪು ಹಂದಿ ಮತ್ತು ಇತರ ಸಾಮಗ್ರಿಗಳನ್ನು ವಶಪಡಿಸಿಕೊಂಡಿದೆ. ಆರೋಪಿ ಜೀವಂತ ಪ್ಯಾಂಗೊಲಿನ್ ಹೊಂದಿದ್ದು, ಯಾವುದೇ ಮಾನ್ಯ ದಾಖಲೆಗಳನ್ನು ಹೊಂದಿರಲಿಲ್ಲ ಎಂದು ತಿಳಿದು ಬಂದಿದೆ. 

"ಆರೋಪಿಯನ್ನು ಮುಂದಿನ ಕಾನೂನು ಕ್ರಮಕ್ಕಾಗಿ ಪದ್ಮಾಪುರ ಅರಣ್ಯ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ. ಜೀವಂತ  ಚಿಪ್ಪು ಹಂದಿಯನ್ನು ಸುರಕ್ಷಿತ ಕಸ್ಟಡಿಗಾಗಿ ಜಿಲ್ಲಾ ಅರಣ್ಯ ಅಧಿಕಾರಿ (ಡಿಎಫ್‌ಒ) ಬರ್ಗಢ್ ಅವರಿಗೆ ಹಸ್ತಾಂತರಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ" ಎಂದು ಒಡಿಶಾ ಎಸ್‌ಟಿಎಫ್ ಐಜಿ ತಿಳಿಸಿದ್ದಾರೆ.

ಭಾರತದಲ್ಲಿ ಪ್ಯಾಂಗೋಲಿನ್ ಅನ್ನು ದಪ್ಪ ಬಾಲದ ಪ್ಯಾಂಗೊಲಿನ್, ಸ್ಕೇಲಿ ಆಂಟೀಟರ್ ಮತ್ತು ಒಡಿಯಾದಲ್ಲಿ 'ಬಜ್ರಕಟ್ಪಾ' ಎಂದೂ ಕರೆಯುತ್ತಾರೆ. ಇದು ಒಂಟಿಯಾಗಿ ನಿಧಾನವಾಗಿ ಚಲಿಸುವ ರಾತ್ರಿಯ ಸಸ್ತನಿಯಾಗಿದೆ. ವನ್ಯಜೀವಿ ಸಂರಕ್ಷಣಾ ಕಾಯಿದೆ 1972 ರ ಅಡಿಯಲ್ಲಿ ಶೆಡ್ಯೂಲ್-I ರಕ್ಷಿತ ಪ್ರಾಣಿಯಾಗಿದೆ. ಶೆಡ್ಯೂಲ್-1 ಸಂಪೂರ್ಣ ರಕ್ಷಣೆಯನ್ನು ಒದಗಿಸುತ್ತದೆ. 

ಇದನ್ನೂ ಓದಿ:ವಿಡಿಯೋ: ನಾಡಿಗೆ ಬಂದ ಅಳಿವಿನಂಚಿನ ಪ್ರಾಣಿ ಚಿಪ್ಪು ಹಂದಿ ರಕ್ಷಿಸಿದ ಜನರು

ABOUT THE AUTHOR

...view details