ನಡೆದುಕೊಂಡು ಹೋಗುತ್ತಿದ್ದ ಪಾದಚಾರಿಗೆ ಬೈಕ್ ಡಿಕ್ಕಿ: ಸ್ಥಳದಲ್ಲೇ ಸಾವು - ಮಾರುಕಟ್ಟೆ ಪೊಲೀಸ್ ಠಾಣೆ
Published : Dec 18, 2023, 10:32 PM IST
ಶಿರಸಿ (ಉತ್ತರ ಕನ್ನಡ) :ಪಾದಚಾರಿಯೊಬ್ಬರು ರಸ್ತೆ ದಾಟುತ್ತಿದ್ದ ಸಂದರ್ಭ ವೇಗವಾಗಿ ಬಂದ ಬೈಕ್ ಡಿಕ್ಕಿಯಾಗಿರುವುದರಿಂದ ವ್ಯಕ್ತಿ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಹುಬ್ಬಳ್ಳಿ - ಶಿರಸಿ ರಸ್ತೆಯ ವಿವೇಕಾನಂದನಗರದಲ್ಲಿ ಸೋಮವಾರ ನಡೆದಿದೆ.
ಶಿರಸಿ ಗುತ್ತಿಗೆದಾರ ಸಂಘದ ಸಹ ಕಾರ್ಯದರ್ಶಿಯಾಗಿದ್ದ, ಕಸ್ತೂರಬಾ ನಗರದ ಕುಬೇರ ತಂದೆ ರಾಮಪ್ಪ ಪೂಜಾರ (46) ಮೃತ ಗುತ್ತಿಗೆದಾರ. ಆರೋಪಿತ ಬೈಕ್ ಚಾಲಕ ನಗರದ ಮುಸ್ಲಿಂಗಲ್ಲಿಯ ಅಬ್ದುಲ್ ಖಾದರ್ ಎಜಾಜ್ ಅಹಮ್ಮದ್ (ಬೈಕ್ ನಂ ಕೆ,ಎ 20 ಇಡಿ 9077 ) ಶಿರಸಿ ಹುಬ್ಬಳ್ಳಿ ರಸ್ತೆಯಲ್ಲಿ ಹುಬ್ಬಳ್ಳಿ ಕಡೆಯಿಂದ ಶಿರಸಿ ಕಡೆಗೆ ಹೋಗಲು ಅತೀ ವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದವರು, ಬೈಕ್ ವೇಗವನ್ನು ನಿಯಂತ್ರಿಸಲಾಗದೇ ವಿವೇಕಾನಂದ ನಗರ ಕ್ರಾಸ್ ಹತ್ತಿರ ಸಿಮೆಂಟ್ ಅಂಗಡಿ ಎದುರು ರಸ್ತೆಯ ಬದಿಯಲ್ಲಿ ನಿಂತುಕೊಂಡಿದ್ದ ಕುಬೇರ ರಾಮಪ್ಪ ಪೂಜಾರ ಇವರಿಗೆ ಡಿಕ್ಕಿ ಹೊಡೆದಿದ್ದಾರೆ. ಅಪಘಾತದ ರಭಸಕ್ಕೆ ರಸ್ತೆಯ ಮೇಲೆ ಬಿದ್ದು ತಲೆಗೆ ತೀವ್ರ ಗಾಯವಾಗಿದ್ದರಿಂದ ಸ್ಥಳದಲ್ಲಿಯೇ ಮೃತ ಪಟ್ಟಿದ್ದಾರೆ.
ಮರಣಕ್ಕೆ ಕಾರಣವಾದ ಮೋಟಾರ್ ಸೈಕಲ್ ನಂಬರ್ ಕೆ, ಎ 20 ಇಡಿ 9077 ರ ಸವಾರನ ವಿರುದ್ದ ಐಪಿಸಿ 304, 279 ಕಲಂ ಅಡಿ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯ ದ್ವಿಚಕ್ರ ವಾಹನವನ್ನು ಜಪ್ತಿ ಮಾಡಿಕೊಂಡಿದ್ದಾರೆ. ಆರೋಪಿಗಾಗಿ ಹುಡುಕಾಟ ನಡೆದಿದೆ. ಅಪಘಾತಕ್ಕೆ ಸಂಬಂಧಿಸಿದ ಸಿಸಿಟಿವಿ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ:ಬೆಳಗಾವಿ: ವೃದ್ಧನಿಗೆ ಡಿಕ್ಕಿಯಾಗಿ ಬಸ್ ಚಕ್ರದಡಿ ಸಿಲುಕಿದ ಬೈಕ್; ಮಹಿಳೆ ಸಾವು