ದೇವಸ್ಥಾನದ ಮೇಲೆ ಪೆಟ್ರೋಲ್ ಬಾಂಬ್ ಎಸೆದ ವ್ಯಕ್ತಿಯ ಬಂಧನ: ಬಿಯರ್ ಬಾಟಲಿಗೆ ಪೆಟ್ರೋಲ್ ಸುರಿಯುತ್ತಿರುವ ದೃಶ್ಯ ಸೆರೆ - ಬಿಯರ್ ಬಾಟಲಿಗೆ ಪೆಟ್ರೋಲ್
Published : Nov 10, 2023, 10:33 PM IST
|Updated : Nov 10, 2023, 10:41 PM IST
ಚೆನ್ನೈ(ತಮಿಳುನಾಡು): ನಗರದ ಉತ್ತರ ಭಾಗದಲ್ಲಿರುವ ಪ್ಯಾರಿ ಕಾರ್ನರ್ ಬಳಿಯ ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನದ ಮೇಲೆ ಪೆಟ್ರೋಲ್ ಬಾಂಬ್ ಎಸೆದಿದ್ದ ಎಂದು ಆರೋಪಿಸಲಾಗಿರುವ ವ್ಯಕ್ತಿಯೊಬ್ಬನನ್ನು ಗ್ರೇಟರ್ ಚೆನ್ನೈ ಪೊಲೀಸರು ಬಂಧಿಸಿದ್ದಾರೆ. ಶಂಕಿತ ಆರೋಪಿಯನ್ನು ಜೆ ಮುರಳಿಕೃಷ್ಣನ್ (39) ಎಂದು ಗುರುತಿಸಲಾಗಿದೆ. ಬೆಳಿಗ್ಗೆ 8:45ಕ್ಕೆ ಸುಮಾರಿಗೆ ಅಥಿಯಪ್ಪ ಸ್ಟ್ರೀಟ್- ಗೋವಿಂದಪ್ಪ ನಾಯ್ಕನ್ ಸ್ಟ್ರೀಟ್ ಜಂಕ್ಷನ್‌ನಲ್ಲಿರುವ ದೇವಾಲಯದ ಆವರಣವನ್ನು ಪ್ರವೇಶಿಸಿ ಪೆಟ್ರೋಲ್ ತುಂಬಿದ ಬಾಟಲಿಯನ್ನು ಎಸೆದಿದ್ದಾನೆ ಎನ್ನಲಾಗಿದೆ. ಅದೃಷ್ಟವಶಾತ್ ದೇವಾಲಯದ ಅರ್ಚಕರು ಮತ್ತು ಭಕ್ತರು ಬಾಟಲಿ ಬಿದ್ದ ಸ್ಥಳದಿಂದ ದೂರದಲ್ಲಿದಿದ್ದರಿಂದ ಯಾವುದೇ ಹಾನಿಯಾಗಿಲ್ಲ.
ದೇವಸ್ಥಾನದ ಅರ್ಚಕ ಉಮಾಚಂದ್ರನ್ ಮಾತನಾಡಿ, ಮುರಳಿಕೃಷ್ಣನ್ ದೇವಸ್ಥಾನಕ್ಕೆ ಪ್ರವೇಶಿಸಿ ಪೆಟ್ರೋಲ್ ತುಂಬಿದ ಬಾಟಲಿಯನ್ನು ಎಸೆದ. ತಕ್ಷಣ ನೀರನ್ನು ಬಳಸಿ ಬೆಂಕಿಯನ್ನು ನಂದಿಸಲಾಯಿತು ಎಂದರು.
ಇನ್ನು ಚಹಾ ಅಂಗಡಿಯೊಳಗೆ ಫೇಸ್ ಮಾಸ್ಕ್ ಧರಿಸಿ ಆರೋಪಿ ಬಿಯರ್ ಬಾಟಲಿಗೆ ಪೆಟ್ರೋಲ್ ಸುರಿಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ವಿಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಆರೋಪಿಯು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಹಿನ್ನೆಲೆ ಹೊಂದಿದ್ದಾನೆ ಮತ್ತು ಈತ ದೇವಾಲಯಕ್ಕೆ ಆಗಾಗ್ಗೆ ಭೇಟಿ ನೀಡುತ್ತಿದ್ದನು. ಈತ ಮಾನಸಿಕ ಅಸ್ವಸ್ಥನಾಗಿರುವುದು ಈ ಘಟನೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ ಈ ಕೃತ್ಯವನ್ನು ಖಂಡಿಸಿದ್ದಾರೆ.
ಇದನ್ನೂ ಓದಿ:ಸೂರತ್ ರೈಲು ನಿಲ್ದಾಣದಲ್ಲಿ ಹರಿದು ಬಂದ ಜನಸಾಗರ: ರೈಲು ಹತ್ತಲೂ ಪ್ರಯಾಣಿಕರ ಪರದಾಟ.. ವಿಡಿಯೋ