ಭಕ್ತರಿಗೆ ಶಕ್ತಿ: 36 ದಿನಕ್ಕೆ ಮಾದಪ್ಪನ ಹುಂಡಿಯಲ್ಲಿ 2.47 ಕೋಟಿ ಸಂಗ್ರಹ - ಮಲೆ ಮಹದೇಶ್ವರ ಹುಂಡಿ ಎಣಿಕೆ ಕಾರ್ಯ
ಚಾಮರಾಜನಗರ : ರಾಜ್ಯದ ಪ್ರಮುಖ ಯಾತ್ರಾ ಸ್ಥಳಗಳಲ್ಲಿ ಒಂದಾದ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಕೇವಲ 36 ದಿನಗಳಲ್ಲಿ ಎರಡು ಕೋಟಿಗೂ ಅಧಿಕ ರೂ. ಸಂಗ್ರಹವಾಗಿದೆ. ಶಕ್ತಿ ಯೋಜನೆ, ಮಣ್ಣೆತ್ತಿನ ಅಮಾವಾಸ್ಯೆ ಪರಿಣಾಮ ಕೇವಲ 36 ದಿನಗಳಲ್ಲಿ 2,47,15,655 ರೂಪಾಯಿ ಸಂಗ್ರಹವಾಗಿದೆ.
ನಿಷೇಧಕ್ಕೊಳಗಾಗಿ ವಿನಿಮಯಕ್ಕೆ ಅವಕಾಶವಿರುವ 2 ಸಾವಿರ ರೂ. ಮುಖಬೆಲೆಯ 37 ನೋಟುಗಳು ಹುಂಡಿಯಲ್ಲಿ ಸಿಕ್ಕಿದ್ದು, 77 ಗ್ರಾಂ ಚಿನ್ನ, 2.250 ಗ್ರಾಂ ಬೆಳ್ಳಿಯನ್ನು ಭಕ್ತರು ಕಾಣಿಕೆ ರೂಪದಲ್ಲಿ ದೇವರಿಗೆ ಅರ್ಪಿಸಿದ್ದಾರೆ. ಪ್ರಾಧಿಕಾರದ ಕಾರ್ಯದರ್ಶಿ ಗೀತಾ ಹುಡೇದಾ ಮೇಲ್ವಿಚಾರಣೆಯಲ್ಲಿ ಹುಂಡಿ ಎಣಿಕೆ ಕಾರ್ಯ ನಡೆಸಲಾಯಿತು. ಸಿಸಿಟಿವಿ ಕ್ಯಾಮರಾದ ಕಣ್ಗಾವಲು ಹಾಗೂ ಪೊಲೀಸ್ ಬಿಗಿ ಬಂದೋಬಸ್ತ್ ನಡುವೆ ಎಣಿಕೆ ಕಾರ್ಯ ನಡೆಯಿತು.
ಇದನ್ನೂ ಓದಿ :ಉಘೇ ಮಾದಪ್ಪ ... 30 ದಿನದಲ್ಲಿ ಮಲೆ ಮಾದಪ್ಪನಿಗೆ ಕೋಟಿ - ಕೋಟಿ ಕಾಣಿಕೆ