ರಾಮು ಅವರನ್ನು ನೆನೆದು ಮಾಲಾಶ್ರೀ, ಆರಾಧನಾ ರಾಮ್ ಭಾವುಕ
Published : Dec 29, 2023, 8:22 PM IST
'ಕಾಟೇರ' ಸಿನಿಮಾ ಇಂದು ಎಲ್ಲೆಡೆ ಭರ್ಜರಿ ಓಪನಿಂಗ್ ಪಡೆದಿದೆ. ಹಿರಿಯ ನಟಿ ಮಾಲಾಶ್ರೀ ಹಾಗು ಮಗಳು, ಚಿತ್ರದ ನಾಯಕಿ ಆರಾಧನಾ ರಾಮ್ ಅವರು ಚಿತ್ರ ವೀಕ್ಷಿಸಿ ಬಳಿಕ ಮಾಧ್ಯಮಗಳ ಜತೆ ಮಾತನಾಡುತ್ತಾ ಭಾವುಕರಾದರು.
"ರಾಮು ಅವರಿಗೆ ದರ್ಶನ್ ಫೇವರೆಟ್. ನಮ್ಮ ಮಗಳಿಗೆ ದರ್ಶನ್ ಜೊತೆ ದೊಡ್ಡ ಚಿತ್ರದಲ್ಲಿ ಅಭಿನಯಿಸಲು ಅವಕಾಶ ಸಿಕ್ಕಿರುವುದು, ಅದರಲ್ಲೂ ಪವರ್ಫುಲ್ ರೋಲ್ ಸಿಕ್ಕಿರುವುದು ತಮಾಷೆಯ ವಿಚಾರವಲ್ಲ. ಇಷ್ಟು ದೊಡ್ಡ ಮಟ್ಟದ ಸಿನಿಮಾವನ್ನು ಮಗಳು ಮಾಡುವುದು ರಾಮು ಮತ್ತು ನನ್ನ ಕನಸಾಗಿತ್ತು. ಅವರಿಗೆ ಮಗಳು ಇಂಡಸ್ಟ್ರಿಗೆ ಬರುವಾಗ ದೊಡ್ಡ ಮಟ್ಟದಲ್ಲೇ ಸಿನಿಮಾ ಮಾಡಬೇಕು ಎಂಬ ಆಸೆ ಇತ್ತು. ಈಗ ಇಬ್ಬರ ಕನಸು ನನಸಾಗಿದೆ. ಇದರ ಬಗ್ಗೆ ನನಗೆ ಹೆಮ್ಮೆ ಇದೆ" ಎಂದು ಮಾಲಾಶ್ರೀ ಹೇಳಿದರು.
ಆರಾಧನಾ ರಾಮ್ ಮಾತನಾಡಿ, "ನನಗೆ ಮಾತನಾಡಲು ಆಗುತ್ತಿಲ್ಲ. ತುಂಬಾ ಕಷ್ಟ ಅನ್ನಿಸುತ್ತಿದೆ. ನಮ್ಮ ತಂದೆ ನಮ್ಮ ಜೊತೆಗೇ ಇದ್ದಾರೆ ಎಂಬ ನಂಬಿಕೆ ಇದೆ. ತಂದೆಯ ಆಶೀರ್ವಾದದಿಂದಲೇ ನನಗೆ ಈ ಅವಕಾಶ ದೊರಕಿದೆ. ಎಲ್ಲರ ಪ್ರೀತಿ ಸಿಕ್ಕಿದೆ" ಎಂದರು.
ಇದನ್ನೂ ಓದಿ:'ಕಾಟೇರ' ಸಿನಿಮಾ ಹೇಗಿದೆ?: ಯಾರು, ಏನಂದ್ರು? ವಿಡಿಯೋ ನೋಡಿ