ಟೋಲ್ ಪ್ಲಾಜಾದಲ್ಲಿ ತಪ್ಪಿದ ಭಾರೀ ಅನಾಹುತ.. ಸಾವಿನ ದವಡೆಯಿಂದ ಪಾರಾದ ಯುವತಿ! - ಏಕಾಏಕಿ ಟ್ರಕ್‌ನ ಬ್ರೇಕ್ ವಿಫಲ
ಉತ್ತರಾಖಂಡ:ದೋಯಿವಾಲಾದ ಲಾಚಿವಾಲಾ ಟೋಲ್ ಪ್ಲಾಜಾದಲ್ಲಿ ಮೈ ಜುಂ ಎನ್ನುವ ಘಟನೆ ನಡೆದಿದೆ. ಈ ವಿಡಿಯೋದಲ್ಲಿ ಯುವತಿಯೊಬ್ಬಳು ಟ್ರಕ್‌ನಡಿ ಸಿಲುಕಿಕೊಳ್ಳುವುದಕ್ಕೂ ಮುನ್ನವೇ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಈ ವಿಡಿಯೋವನ್ನು ಗಮನಿಸಿದರೆ, ಭಯ ಮೂಡುವ ರೀತಿ ದೃಶ್ಯವಿದೆ. ಶುಕ್ರವಾರ ಮಧ್ಯಾಹ್ನ ನಡೆದಿರುವ ಘಟನೆ ಎಂದು ಹೇಳಲಾಗುತ್ತಿದೆ. ಡೆಹ್ರಾಡೂನ್‌ನಿಂದ ಬರುತ್ತಿದ್ದ ಯುವತಿ ಮಧ್ಯಾಹ್ನ ಟೋಲ್ ಪ್ಲಾಜಾ ಬಳಿ ತಲುಪಿದಾಗ, ಹಿಂದಿನಿಂದ ಅತಿವೇಗದಲ್ಲಿ ಬಂದ ಸರಕು ತುಂಬಿದ್ದ ಟ್ರಕ್‌ನ ಚಾಲಕ ತನ್ನ ನಿಯಂತ್ರಣವನ್ನು ಕಳೆದುಕೊಂಡಿದ್ದಾನೆ ಎಂದು ಲಾಚಿವಾಲಾ ಟೋಲ್ ಕಾರ್ಯಕರ್ತ ರಾಕೇಶ್ ನೌಟಿಯಾಲ್ ತಿಳಿಸಿದರು.
ಯುವತಿ ಮೇಲೆ ಹತ್ತುವ ಮೊದಲೇ, ಈ ಟ್ರಕ್ ಇನ್ನೊಂದು ಬದಿಯಲ್ಲಿ ಪಲ್ಟಿಯಾಗಿದೆ. ಏಕಾಏಕಿ ಟ್ರಕ್‌ನ ಬ್ರೇಕ್ ವಿಫಲವಾಗಿದೆ ಎಂದು ಹೇಳಲಾಗುತ್ತಿದೆ. ಈ ಟ್ರಕ್ ಹೆಚ್ಚಿನ ವೇಗದಲ್ಲಿ ಟೋಲ್ ಪ್ಲಾಜಾದ ಲೇನ್ ಸಂಖ್ಯೆ 10 ಅನ್ನು ಪ್ರವೇಶಿಸಿತು. ಲಾರಿ ಚಾಲಕನ ಚಾಣಾಕ್ಷತನದಿಂದ ಭಾರೀ ಅನಾಹುತ ತಪ್ಪಿದೆ.
ಇದನ್ನೂ ಓದಿ:ಗಂಡ - ಹೆಂಡತಿ ಮತ್ತು ಅವಳು: ಒಬ್ಬ ಪುರುಷನಿಗಾಗಿ ಇಬ್ಬರು ಮಹಿಳೆಯರ ಕಿತ್ತಾಟ.. ರಸ್ತೆಯಲ್ಲೇ ರಂಪಾಟ