ಮೆಕ್ಕೆಜೋಳಕ್ಕೆ ಕೊಳೆರೋಗ ಬಾಧೆ.. 12 ಎಕರೆ ಬೆಳೆ ನಾಶ ಮಾಡಿದ ರೈತ.. - ಸೂಕ್ತ ಪರಿಹಾರ ನೀಡುವಂತೆ ರೈತ ದೇವಿಂದ್ರಪ್ಪ ಮನವಿ
ಹಾವೇರಿ: ಎರಡು ವಾರ ಕಾಲ ನಿರಂತರವಾಗಿ ಸುರಿದ ಮಳೆಯಿಂದಾಗಿ ಬೆಳೆಗೆ ಕೊಳೆರೋಗ ಬಾಧೆ ಕಾಣಿಸಿಕೊಂಡಿರುವ ಹಿನ್ನೆಲೆ ರೈತನೊಬ್ಬ ತಾನು ಬೆಳೆದಿದ್ದ 12 ಎಕರೆ ಮೆಕ್ಕೆಜೋಳದ ಬೆಳೆಯನ್ನು ನಾಶ ಮಾಡಿರುವ ಘಟನೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಹೊಸಹುಲಿಹಳ್ಳಿ ಗ್ರಾಮದಲ್ಲಿ ನಡೆದಿದೆ.
ಹೊಸಹುಲಿಹಳ್ಳಿ ಗ್ರಾಮದ ದೇವಿಂದ್ರಪ್ಪ ಎಂಬ ರೈತ ಟ್ರ್ಯಾಕ್ಟರ್ ನಿಂದ ರೂಟರ್ ಹೊಡೆದು 12 ಎಕರೆ ಮೆಕ್ಕೆಜೋಳದ ಬೆಳೆ ನಾಶ ಮಾಡಿದ್ದಾನೆ. ಮೆಕ್ಕೆಜೋಳ ಬೆಳೆಗೆ 1 ಲಕ್ಷಕ್ಕೂ ಅಧಿಕ ಹಣ ಖರ್ಚು ಮಾಡಿ ರೈತ ದೇವಿಂದ್ರಪ್ಪ ಮೆಕ್ಕೆಜೋಳ ಬಿತ್ತನೆ ಮಾಡಿದ್ದ. ಎರಡು ವಾರ ಕಾಲ ಸುರಿದ ಮಳೆಯಿಂದಾಗಿ ಮೆಕ್ಕೆಜೋಳ ಬೆಳೆಗೆ ಕೊಳೆ ರೋಗಬಾಧೆ ಕಾಣಿಸಿಕೊಂಡಿದೆ. ರೈತ ಎಷ್ಟೇ ಕೀಟನಾಶಕ ಸಿಂಪಡಿಸಿದರೂ, ಕೊಳೆರೋಗ ಬಾಧೆ ಕಡಿಮೆ ಆಗಲಿಲ್ಲ. ಇದರಿಂದ ಬೇಸರವಾಗಿ ಮಂಗಳವಾರ ರೈತ ಟ್ರ್ಯಾಕ್ಟರ್ ನಿಂದ ರೂಟರ್ ಹೊಡೆದು ಬೆಳೆ ನಾಶ ಮಾಡಿದ್ದಾನೆ.
ಎಡೆಬಿಡದೇ ಮಳೆಯಾಗಿದ್ದರಿಂದ ಕೊಳೆ ರೋಗಬಾಧೆ ಕಾಣಿಸಿಕೊಂಡಿದೆ. ಹೀಗಾಗಿ ಮೆಕ್ಕೆಜೋಳದ ಬೆಳೆಯನ್ನು ನಾಶ ಮಾಡಿದ್ದು, ಸೂಕ್ತ ಪರಿಹಾರ ನೀಡುವಂತೆ ರೈತ ದೇವಿಂದ್ರಪ್ಪ ಮನವಿ ಮಾಡಿದ್ದಾನೆ.
ಇದನ್ನೂಓದಿ:ರೈತನ ಕೈ ಹಿಡಿದ ದಾಳಿಂಬೆ ಬೆಳೆ.. ಕೃಷಿಯಲ್ಲಿ ಯಶಸ್ಸು ಕಂಡ ನಿವೃತ್ತ ನೌಕರ