ಮಹಾಶಿವರಾತ್ರಿ ಹಿನ್ನೆಲೆ ಮಾದಪ್ಪನ ಬೆಟ್ಟದಲ್ಲಿ ಜನಸಾಗರ: ಸಾಲೂರು ಮಠದಿಂದ ಭಕ್ತರಿಗೆ ಮುದ್ದೆ - ಬಸ್ಸಾರು ಪ್ರಸಾದ
ಚಾಮರಾಜನಗರ:ಮಹಾಶಿವರಾತ್ರಿ ಹಿನ್ನೆಲೆ ಪ್ರಸಿದ್ಧ ಯಾತ್ರಾ ಸ್ಥಳವಾದ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟಕ್ಕೆ ಲಕ್ಷಾಂತರ ಮಂದಿ ಭಕ್ತರು ಆಗಮಿಸಿ ದೇವರ ದರ್ಶನ ಪಡೆಯುತ್ತಿದ್ದಾರೆ. ಮಲೆಮಹದೇಶ್ವರ ದೇವಾಲಯದ ಪ್ರಾಂಗಣಕ್ಕೆ ಫಲ ಹಾಗೂ ತರಕಾರಿ ಅಲಂಕಾರ ಮಾಡಿರುವುದು ಗಮನ ಸೆಳೆಯುತ್ತಿದೆ. ಬೆಟ್ಟಕ್ಕೆ ಬರುವ ಭಕ್ತರಿಗೆ ಸಾಲೂರು ಮಠದಿಂದ ಮುದ್ದೆ, ಬಸ್ಸಾರು ಹಾಗೂ ಹುರುಳಿಕಾಳನ್ನು ಪ್ರಸಾದವಾಗಿ ವಿತರಿಸಲಾಗುತ್ತಿದೆ. ಸಾಲೂರು ಶ್ರೀಗಳು ಮುದ್ದೆ ಕಟ್ಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. ಈಗಾಗಲೇ 30 ಸಾವಿರ ಮಂದಿ ಪ್ರಸಾದ ಸೇವಿಸಿದ್ದು, 50 ಸಾವಿರ ಮಂದಿಗೆ ಮುದ್ದೆ ಪ್ರಸಾದ ತಯಾರಿಸಲಾಗುತ್ತಿದೆ. ಇದರೊಂದಿಗೆ ಪ್ರಾಧಿಕಾರದಿಂದಲೂ ನಿರಂತರ ದಾಸೋಹ ವ್ಯವಸ್ಥೆ ಕಲ್ಪಿಸಲಾಗಿದೆ.
ಇದನ್ನೂ ಓದಿ: ಮಾದಪ್ಪನ ಶಿವರಾತ್ರಿ ಜಾತ್ರೆಗೆ ಆಗಮಿಸುತ್ತಿರುವ ಭಕ್ತರು: ಕಾವೇರಿ ನದಿ ದಾಟುತ್ತಿರುವ ಜನ ಸಾಗರ