ವಿಜಯಪುರ ಜಿಲ್ಲೆಯಲ್ಲಿ ಮಹಾಶಿವರಾತ್ರಿ ಸಂಭ್ರಮ - ಐತಿಹಾಸಿಕ 770 ಲಿಂಗದ ದೇವಸ್ಥಾನ
ವಿಜಯಪುರ:ವಿಜಯಪುರ ಜಿಲ್ಲೆಯಲ್ಲಿ ಮಹಾಶಿವರಾತ್ರಿ ಸಂಭ್ರಮ ಮನೆ ಮಾಡಿತ್ತು.ವಿಜಯಪುರದ ಐತಿಹಾಸಿಕ ಶಿವಗಿರಿಗೆ ಬೆಳಗ್ಗೆಯಿಂದ ಸಾವಿರಾರು ಭಕ್ತಾಧಿಗಳು ಆಗಮಿಸಿ, ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಭಕ್ತರ ಸಂಖ್ಯೆ ಅಧಿಕವಾಗಿತ್ತು. ಮೂರು ಗೇಟ್ಗಳ ಮೂಲಕ ಭಕ್ತರು ಶಿವನ ದರ್ಶನ ಪಡೆಯಲು ವ್ಯವಸ್ಥೆ ಕಲ್ಪಿಸಲಾಗಿತ್ತು. ಸಿದ್ದೇಶ್ವರ ಶ್ರೀಗಳು ಲಿಂಗೈಕೆರಾದ ಹಿನ್ನೆಲೆಯಲ್ಲಿ ಈ ವರ್ಷ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಂಡಿರಲಿಲ್ಲ. ಕೇವಲ ಧಾರ್ಮಿಕ ಆಚರಣೆಗೆ ಮಾತ್ರ ಸೀಮಿತವಾಗಿತ್ತು.
ವಿಜಯಪುರ ನಗರದ ಶಿವಗಿರಿ ಅಷ್ಟೇ ಅಲ್ಲದೆ ವಿಜಯಪುರದ ಐತಿಹಾಸಿಕ 770 ಲಿಂಗದ ದೇವಸ್ಥಾನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸಿದ್ದರು. ಶಿವಲಿಂಗಗಳಿಗೆ ಪೂಜೆ ಸಲ್ಲಿಸಿದರು. ನಗರದ ಗೋಲಗುಮ್ಮಟ ಬಳಿಯ ಇತಿಹಾಸ ಪ್ರಸಿದ್ಧ ಸುಂದರೇಶ್ವರ ದೇವಸ್ಥಾನದಲ್ಲೂ ಶಿವರಾತ್ರಿ ಅಂಗವಾಗಿ ವಿಶೇಷ ಪೂಜಾ ಕಾರ್ಯ ನೆರವೇರಿಸಲಾಯಿತು.
ಇದನ್ನೂಓದಿ:22 ಅಡಿ ಉದ್ದದ ಒಂದು ಲಕ್ಷ ವಿಭಿನ್ನ ಪುಷ್ಪಗಳಿಂದ ಮಹಾಶಿವರಾತ್ರಿ ಆಚರಣೆ..