ಮಹಾರಾಷ್ಟ್ರ: ಮಕ್ಕಳ ಕಳ್ಳಸಾಗಣೆಯಿಂದ 59 ಮಕ್ಕಳನ್ನು ರಕ್ಷಿಸಿದ ಭೂಸಾವಲ್ ರೈಲ್ವೇ ಪೊಲೀಸರು
ನಾಸಿಕ್: ಮಹತ್ವದ ಕ್ರಮ ಕೈಗೊಂಡಿರುವ ರೈಲ್ವೆ ಪೊಲೀಸರು ಮಕ್ಕಳ ಕಳ್ಳಸಾಗಣೆ ಪ್ರಕರಣವನ್ನು ಭೇದಿಸಿದ್ದಾರೆ. ದಾನಪುರ - ಪುಣೆ ಎಕ್ಸ್‌ಪ್ರೆಸ್ ಮೂಲಕ ಬಿಹಾರದಿಂದ ಮಹಾರಾಷ್ಟ್ರಕ್ಕೆ ಕರೆತರುತ್ತಿದ್ದ 59 ಮಕ್ಕಳನ್ನು ಆರೋಪಿಗಳ ಕಪಿಮುಷ್ಠಿಯಿಂದ ರಕ್ಷಿಸಲಾಗಿದೆ. ಮನ್ಮಾಡ್‌ನಿಂದ 30 ಮತ್ತು ಭೂಸಾವಲ್ ರೈಲು ನಿಲ್ದಾಣದಿಂದ 29 ಮಕ್ಕಳನ್ನು ರಕ್ಷಿಸಲಾಗಿದೆ. ಈ ಮಕ್ಕಳು 8 ರಿಂದ 18 ವರ್ಷದೊಳಗಿನವರು. ಈ ಮಕ್ಕಳನ್ನು ರೈಲಿನಲ್ಲಿ ಕಳ್ಳಸಾಗಣೆಗಾಗಿ ಕರೆತರಲಾಗುತ್ತಿದ್ದು, ಸಾಂಗ್ಲಿ ಅಥವಾ ಪುಣೆಯ ಮದರಸಾಕ್ಕೆ ಕರೆತರುವ ಯೋಜನೆ ಇತ್ತು ಎಂದು ಪೊಲೀಸರು ಶಂಕಿಸಿದ್ದಾರೆ. ಈ ಮಕ್ಕಳೊಂದಿಗೆ ಇದ್ದ ಐವರು ಆರೋಪಿಗಳನ್ನು ಬಂಧಿಸಲಾಗಿದ್ದು, ಅವರ ವಿರುದ್ಧ ಐಪಿಸಿ ಸೆಕ್ಷನ್ 470 ರ ಅಡಿ ಪ್ರಕರಣ ದಾಖಲಿಸಲಾಗಿದೆ.
ರಕ್ಷಿಸಲಾದ ಕೆಲವು ಮಕ್ಕಳನ್ನು ನಾಸಿಕ್‌ನ ಉಂತ್ವಾಡಿ ಪ್ರದೇಶದ ಬಾಲಾಪರಾಧಿ ಗೃಹಕ್ಕೆ ಕಳುಹಿಸಲಾಗಿದೆ. ಭೂಸಾವಲ್ ರೈಲ್ವೇ ರಕ್ಷಣಾ ಪಡೆ ಮತ್ತು ರೈಲ್ವೇ ಪೊಲೀಸ್ ತಂಡವು ಬಿಹಾರದ ಪುರ್ನಿಯಾ ಜಿಲ್ಲೆಯಿಂದ ಸಾಂಗ್ಲಿಗೆ ಕಳ್ಳಸಾಗಣೆ ನಡೆಸುತ್ತಿದ್ದ ಕೃತ್ಯವನ್ನು ಭೇದಿಸುವಲ್ಲಿ ಯಶಸ್ವಿಯಾಗಿದೆ.
ಇದನ್ನೂ ನೋಡಿ:ಮಳೆ ಆರ್ಭಟಕ್ಕೆ ಕೆಆರ್ಎಸ್ ಬೃಂದಾವನದಲ್ಲಿ ಧರೆಗುರುಳಿದ ಮರಗಳು: ವಿಡಿಯೋ