ಕರ್ನಾಟಕ

karnataka

ಲಡ್ಡು ಪರ್ವತ... ಮಾದಪ್ಪನ ಬೆಟ್ಟದಲ್ಲಿ ಶಿವರಾತ್ರಿ ಜಾತ್ರೆಗಾಗಿ 3.5 ಲಕ್ಷ ಲಡ್ಡು ತಯಾರು!!

ETV Bharat / videos

ಲಡ್ಡು ಪರ್ವತ! ಮಾದಪ್ಪನ ಬೆಟ್ಟದಲ್ಲಿ ಶಿವರಾತ್ರಿ ಸಂಭ್ರಮಕ್ಕೆ 3.5 ಲಕ್ಷ ಲಡ್ಡು ತಯಾರಿ - ETV bharat kannada

By

Published : Feb 16, 2023, 6:20 PM IST

Updated : Feb 16, 2023, 7:50 PM IST

ಚಾಮರಾಜನಗರ: ದಕ್ಷಿಣ ಭಾರತದ ಪ್ರಮುಖ‌ ಯಾತ್ರಾಸ್ಥಳ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಇದೇ 17 ರಿಂದ 21ರ ವರೆಗೆ ಮಹಾಶಿವರಾತ್ರಿ ಜಾತ್ರೆ ನಡೆಯಲಿದೆ. ಇದಕ್ಕಾಗಿ ಪ್ರಾಧಿಕಾರ ಸಕಲ ಸಿದ್ಧತೆ ಮಾಡಿಕೊಂಡಿದೆ. ಸುಮಾರು 3.5 ಲಕ್ಷ ಲಡ್ಡುಗಳನ್ನು ತಯಾರಿಸಿ ದಾಸ್ತಾನು ಮಾಡಿದ್ದು ಭಕ್ತರ ಬೇಡಿಕೆಗೆ ಅನುಗುಣವಾಗಿ ಮತ್ತಷ್ಟು ಲಡ್ಡು ಪ್ರಸಾದ ತಯಾರಿಸಲು ಸಿದ್ಧತೆ ನಡೆದಿದೆ. ಆಹಾರದ ಉಗ್ರಾಣದಲ್ಲಿರುವ ಅಪಾರ ಪ್ರಮಾಣದ ಲಡ್ಡುಗಳ ರಾಶಿ ಬೆಟ್ಟದಂತೆ ಕಾಣುತ್ತಿದೆ. ಇನ್ನು, ಭಕ್ತರ ಅನುಕೂಲಕ್ಕಾಗಿ ಸಾರಿಗೆ ಸಂಸ್ಥೆಯು 5 ದಿನಗಳ ಕಾಲ ನಿರಂತರ 500 ಬಸ್ ಸೇವೆ ಒದಗಿಸಲು ಮುಂದಾಗಿದೆ. ಸುರಕ್ಷತಾ ಕ್ರಮವಾಗಿ ದ್ವಿಚಕ್ರ ವಾಹನಗಳ ಓಡಾಟವನ್ನು ಸಂಪೂರ್ಣವಾಗಿ ನಿರ್ಬಂಧಿಸಿ ಎಸ್​ಪಿ ಆದೇಶಿಸಿದ್ದಾರೆ.

ಇದನ್ನೂ ಓದಿ:ಮಾದಪ್ಪನ ಶಿವರಾತ್ರಿ ಜಾತ್ರೆಗೆ ಆಗಮಿಸುತ್ತಿರುವ ಭಕ್ತರು: ಕಾವೇರಿ ನದಿ ದಾಟುತ್ತಿರುವ ಜನ ಸಾಗರ

Last Updated : Feb 16, 2023, 7:50 PM IST

ABOUT THE AUTHOR

...view details