ಕರ್ನಾಟಕ

karnataka

300 ಅಡಿಯ ಕೊಳವೆ ಬಾವಿಗೆ ಬಿದ್ದ ಎರಡೂವರೆ ವರ್ಷದ ಬಾಲಕಿ: ರಕ್ಷಣಾ ಕಾರ್ಯ ಆರಂಭ

ETV Bharat / videos

ಮಧ್ಯಪ್ರದೇಶದಲ್ಲಿ ಕೊಳವೆ ಬಾವಿಗೆ ಬಿದ್ದ ಬಾಲಕಿ: ಭರದಿಂದ ಸಾಗಿದ ರಕ್ಷಣಾ ಕಾರ್ಯ- ವಿಡಿಯೋ

By

Published : Jun 6, 2023, 7:55 PM IST

ಸೆಹೋರ್​ (ಮಧ್ಯಪ್ರದೇಶ): ಎರಡೂವರೆ ವರ್ಷದ ಬಾಲಕಿಯೊಬ್ಬಳು ಸುಮಾರು 300 ಅಡಿ ಆಳದ ಕೊಳವೆ ಬಾವಿಗೆ ಬಿದ್ದ ಘಟನೆ ಮಧ್ಯಪ್ರದೇಶದ ಸೆಹೋರ್ ಜಿಲ್ಲೆಯಲ್ಲಿ ನಡೆದಿದೆ. ಬಾಲಕಿ 50 ಅಡಿ ಆಳದಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕಾಗಮಿಸಿರುವ ರಕ್ಷಣಾ ತಂಡಗಳು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ. ಬಾಲಕಿಗೆ ಪೈಪ್ ಮೂಲಕ ಆಮ್ಲಜನಕ ಪೂರೈಸಲಾಗುತ್ತಿದೆ.  

ಸೆಹೋರ್ ಜಿಲ್ಲಾ ಕೇಂದ್ರದ ಮಂಡಿ ಪೊಲೀಸ್ ಠಾಣಾ ವ್ಯಾಪ್ತಿಯ ಮುನಗಾವಲಿ ಗ್ರಾಮದಲ್ಲಿ ಸೃಷ್ಟಿ ಕುಶ್ವಾಹ ಎಂಬ ಬಾಲಕಿ ಆಟವಾಗುತ್ತಿದ್ದಳು. ಈ ವೇಳೆ ತೆರೆದ ಕೊಳವೆ ಬಾವಿಗೆ ಬಿದ್ದಿದ್ದಾಳೆ ಎಂದು ತಿಳಿದು ಬಂದಿದೆ. ಘಟನೆಯ ಮಾಹಿತಿ ತಿಳಿದ ಕೂಡಲೇ ಗ್ರಾಮಸ್ಥರು ಜಮಾಯಿಸಿ ಸ್ಥಳೀಯ ಪೊಲೀಸ್ ಮತ್ತು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ್ದಾರೆ. ಪೊಲೀಸ್ ವರಿಷ್ಠಾಧಿಕಾರಿ ಮಯಾಂಕ್ ಅವಸ್ತಿ ತಕ್ಷಣವೇ ರಕ್ಷಣಾ ತಂಡವನ್ನು ಸ್ಥಳಕ್ಕೆ ರವಾನಿಸಿದ್ದಾರೆ.

ಎಸ್​ಡಿಆರ್​ಎಫ್​ ತಂಡವು ರಕ್ಷಣಾ ಕಾರ್ಯದಲ್ಲಿ ತೊಡಗಿದೆ. ಕೊಳವೆ ಬಾವಿ ಸಮೀಪದಲ್ಲಿ ಜೆಸಿಬಿ ಯಂತ್ರದ ಮೂಲಕ ಸುರಂಗ ತೆಗೆಯಲಾಗುತ್ತದೆ. ಸುರಂಗ ಮಾರ್ಗದ ಮೂಲಕ ಬಾಲಕಿಯನ್ನು ತಲುಪುವ ಪ್ರಯತ್ನ ನಡೆಯುತ್ತಿದೆ. ಸ್ಥಳದಲ್ಲಿ ಹಿರಿಯ ಅಧಿಕಾರಿಗಳು ಮೊಕ್ಕಾಂ ಹೂಡಿದ್ದಾರೆ. ತೆರೆದ ಬೋರ್‌ವೆಲ್​ಗಳನ್ನು ಮುಚ್ಚಿಸುವಂತೆ ಸಂಬಂಧಪಟ್ಟ ಮಾಲೀಕರಿಗೆ ಸರ್ಕಾರಗಳು ಸೂಚಿಸುತ್ತಲೇ ಇವೆ. ಆದರೂ, ಇಂತಹ ಘಟನೆಗಳು ಮರುಕಳುಹಿಸುತ್ತಿವೆ. 

ಇದನ್ನೂ ಓದಿ:ಮದುವೆ ನಿಶ್ಚಯವಾಗಿದ್ದ ಯುವತಿ ಅಪಹರಿಸಿ ಮರುಭೂಮಿಯಲ್ಲಿ ಎತ್ತಿಕೊಂಡು 'ಸಪ್ತಪದಿ' ತುಳಿದ!

ABOUT THE AUTHOR

...view details